57 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆ: ಕರ್ನಾಟಕದಿಂದ ನಿರ್ಮಲಾ ಸೀತಾರಾಮನ್ ಮತ್ತೆ ಕಣಕ್ಕೆ?

Sagittarius 13 May 2022 Horoscope Today, Rashifal, Lucky Colour, Auspicious Time
Sagittarius 13 May 2022 Horoscope Today, Rashifal, Lucky Colour, Auspicious Time
May 12, 2022
Starfield has been delayed – go ahead and scream, no one can hear you
Starfield has been delayed – go ahead and scream, no one can hear you
May 12, 2022


ಹೊಸದಿಲ್ಲಿ: ಕರ್ನಾಟಕ ನಾಲ್ಕು ಸ್ಥಾನಗಳು ಸೇರಿದಂತೆ ದೇಶದ 57 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ. ರಾಜ್ಯಸಭೆಯಲ್ಲಿ ತೆರವುಗೊಂಡ ಸ್ಥಾನಗಳಿಗೆ ಜೂನ್ 10ರಂದು ಮತದಾನ ನಡೆಯಲಿದೆ. ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ರಾಜ್ಯದ ನಾಲ್ವರು ರಾಜ್ಯಸಭಾ ಸದಸ್ಯರ ಅವಧಿ ಮುಕ್ತಾಯವಾಗಲಿದೆ.

15 ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಇದರ ಜತೆಗೆ ನಾಮ ನಿರ್ದೇಶಿತ ಸಂಸದರ ಏಳು ಸೀಟುಗಳು ಕೂಡ ಖಾಲಿ ಇವೆ. ಜುಲೈ ತಿಂಗಳಲ್ಲಿ ರಾಷ್ಟ್ರಪತಿ ಚುನಾವಣೆ ಬಾಕಿ ಇರುವುದರಿಂದ ಈ ರಾಜ್ಯಸಭಾ ಚುನಾವಣೆ ಬಹಳ ಪ್ರಾಮುಖ್ಯ ಪಡೆದುಕೊಂಡಿದೆ.
ರಾಜ್ಯಸಭೆಯಲ್ಲಿ ಇದೇ ಮೊದಲ ಬಾರಿ 100 ಸ್ಥಾನಗಳ ಸಾಧನೆ ಮಾಡಿದ ಬಿಜೆಪಿ

ಉತ್ತರ ಪ್ರದೇಶದಲ್ಲಿ ಗರಿಷ್ಠ, ಅಂದರೆ 11 ಸೀಟುಗಳು ಖಾಲಿಯಾಗಲಿವೆ. ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಲ್ಲಿ ತಲಾ 6 ಸೀಟುಗಳು ಖಾಲಿಯಾಗುತ್ತಿವೆ. ಬಿಹಾರದಲ್ಲಿ ಐದು, ಕರ್ನಾಟಕ, ರಾಜಸ್ಥಾನ ಮತ್ತು ಆಂಧ್ರಪ್ರದೇಶಗಳಲ್ಲಿ ತಲಾ ನಾಲ್ಕು ಸ್ಥಾನಗಳು ತೆರವುಗೊಳ್ಳುತ್ತಿವೆ. ಮಧ್ಯಪ್ರದೇಶ ಮತ್ತು ಒಡಿಶಾದಿಂದ ಎರಡು, ಪಂಜಾಬ್, ಉತ್ತರಾಖಂಡ, ಹರ್ಯಾಣ, ಛತ್ತೀಸಗಡ ಮತ್ತು ತೆಲಂಗಾಣಗಳಿಂದ ತಲಾ ಎರಡು ಸ್ಥಾನಗಳು ಹಾಗೂ ಉತ್ತರಾಖಂಡದಿಂದ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ನಾಮಪತ್ರ ಸಲ್ಲಿಕೆಗೆ ಮೇ 31 ಕೊನೆಯ ದಿನವಾಗಿದೆ. ಮೇ 24ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತಿದೆ. ಜೂನ್ 1ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಜೂನ್ 3 ಕೊನೆಯ ದಿನ. ಜೂನ್ 10ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಸಂಜೆ 5ರ ಬಳಿಕ ಮತ ಎಣಿಕೆ ನಡೆಯಲಿದೆ.
ಈಶಾನ್ಯ ರಾಜ್ಯಗಳ ರಾಜ್ಯಸಭಾ ಪ್ರಾತಿನಿಧ್ಯ ‘ಕಾಂಗ್ರೆಸ್ ಮುಕ್ತ’! ನಾಲ್ಕೂ ಸೀಟುಗಳಲ್ಲಿ ಎನ್‌ಡಿಎ ಗೆಲುವು

ಕರ್ನಾಟಕದಿಂದ ಆಯ್ಕೆ
ಹಣಕಾಸ ಸಚಿವೆ ನಿರ್ಮಲಾ ಸೀತಾರಾಮನ್, ಕೆ.ಸಿ ರಾಮಮೂರ್ತಿ ಮತ್ತು ಜೈರಾಂ ರಮೇಶ್ ಅವರ ರಾಜ್ಯಸಭೆ ಸದಸ್ಯತ್ವ ಅವಧಿ ಜೂನ್ 30ಕ್ಕೆ ಪೂರ್ಣಗೊಳ್ಳುತ್ತಿದೆ. ಜತೆಗೆ ಆಸ್ಕರ್ ಫರ್ನಾಂಡಿಸ್ ಅವರ ನಿಧನದಿಂದ ಒಂದು ಸ್ಥಾನ ಈಗಾಗಲೇ ತೆರವಾಗಿತ್ತು.

ಪ್ರಸ್ತುತ ಈ 57 ಸೀಟುಗಳ ಪೈಕಿ 23 ಬಿಜೆಪಿ ಬಳಿ ಇದ್ದರೆ, ಎಂಟು ಸ್ಥಾನಗಳು ಕಾಂಗ್ರೆಸ್ ಬಳಿ ಇವೆ. ಉಳಿದ ಸೀಟುಗಳು ಇತರೆ ಪಕ್ಷಗಳ ಮಧ್ಯೆ ಹಂಚಿಕೊಂಡಿವೆ. ಈ ಬಾರಿ ರಾಜ್ಯಸಭಾ ಚುನಾವಣೆ ಬಳಿಕ ರಾಜ್ಯಸಭೆಯಲ್ಲಿ ಡಿಎಂಕೆ ಹಾಗೂ ಎಎಪಿ ಶಕ್ತಿ ಹೆಚ್ಚುವ ಸಾಧ್ಯತೆ ಇದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಅಲ್ಪಸಂಖ್ಯಾತ ಖಾತೆ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಅವಧಿಗಳು ಕೂಡ ಪೂರ್ಣಗೊಳ್ಳುತ್ತಿದ್ದು, ಮರು ಆಯ್ಕೆ ಬಯಸಿದ್ದಾರೆ.
ಕೂಡಲೇ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಿ: ಮಧ್ಯಪ್ರದೇಶಕ್ಕೆ ಸುಪ್ರೀಂ ಬೀಸಿದ ಚಾಟಿ ಕರ್ನಾಟಕಕ್ಕೂ ಅನ್ವಯ..?

ಕಾಂಗ್ರೆಸ್‌ನ ಹಿರಿಯ ನಾಯಕರಾದ ಪಿ ಚಿದಂಬರಂ, ಕಪಿಲ್ ಸಿಬಲ್ ಮತ್ತು ಅಂಬಿಕಾ ಸೋನಿ ಅವರ ಸದಸ್ಯತ್ವ ಅವಧಿ ಕೂಡ ಮುಕ್ತಾಯಗೊಳ್ಳುತ್ತಿದೆ. ಕಳೆದ ತಿಂಗಳು ಈಶಾನ್ಯ ರಾಜ್ಯಗಳಲ್ಲಿ ನಡೆದ ದ್ವೈವಾರ್ಷಿಲ ಚುನಾವಣೆ ಬಳಿಕ ಮೇಲ್ಮನೆಯಲ್ಲಿ ಮೊದಲ ಬಾರಿಗೆ ಬಿಜೆಪಿ 100ರ ಸಂಖ್ಯಾಬಲ ಕಂಡಿತ್ತು. 1990ರ ಬಳಿಕ ಇಷ್ಟು ಸೀಟುಗಳನ್ನು ಕಂಡ ಮೊದಲ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ವಿಧಾನ ಪರಿಷತ್ ಚುನಾವಣೆ
ಕರ್ನಾಟಕದ ಎರಡು ಪದವೀಧರ ಮತ್ತು 2 ಶಿಕ್ಷಕರ ಕ್ಷೇತ್ರಗಳಿಗೆ ಕೂಡ ಚುನಾವಣೆ ದಿನಾಂಕ ಪ್ರಕಟಿಸಲಾಗಿದೆ. ವಾಯವ್ಯ ಪದವೀಧರ ಕ್ಷೇತ್ರದ ನಿರಾಣಿ ಹನುಮಂತಪ್ಪ ರುದ್ರಪ್ಪ ಮತ್ತು ದಕ್ಷಿಣ ಪದವೀಧರ ಕ್ಷೇತ್ರ ಕೆ.ಟಿ ಶ್ರೀಕಂಠೇಗೌಡ ಅವರ ಪರಿಷತ್ ಅವಧಿ ಜುಲೈ 4ಕ್ಕೆ ಮುಗಿಯಲಿದೆ. ಈ ಸ್ಥಾನಗಳಿಗೆ ಜೂನ್ 13ರಂದು ಚುನಾವಣೆ ನಡೆಯಲಿದೆ.Source link

Leave a Reply

Your email address will not be published.