10,000 ಅಕ್ರಮ ಕಟ್ಟಡಗಳ ಸಕ್ರಮಕ್ಕೆ ಬಿಡಿಎ ತೀರ್ಮಾನ, 1,000 ಕೋಟಿ ರೂ. ಆದಾಯದ ನಿರೀಕ್ಷೆ

Not to accept defeat; will continue struggle for rights of Jammu & Kashmir people: Omar on Article 370 abrogation
May 14, 2022
A cheaper Apple TV is rumored to be launching later this year
A cheaper Apple TV is rumored to be launching later this year
May 14, 2022


ನಾನಾ ಬಡಾವಣೆಗಳಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿರುವ ಜಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಂಡವರು, ಯಾವಾಗ ಅದನ್ನು ತೆರವುಗೊಳಿಸಬೇಕಾದೀತೋ ಎಂಬ ಆತಂಕದಲ್ಲಿದ್ದರೆ ಇನ್ನು ಮುಂದೆ ಆ ಚಿಂತೆ ಬೇಡ. ಯಾಕೆಂದರೆ ಮೊದಲ ಬಾರಿಗೆ ಅಂತಹ ಕಟ್ಟಡಗಳನ್ನು ಮರು ಮಂಜೂರಾತಿ ವ್ಯಾಪ್ತಿಯಲ್ಲಿ ಸಕ್ರಮಗೊಳಿಸಲು ಪ್ರಾಧಿಕಾರ ಅವಕಾಶ ಕಲ್ಪಿಸಿದೆ. ಆರು ತಿಂಗಳಲ್ಲಿ ಸಕ್ರಮ ಮಾಡಿಕೊಳ್ಳದಿದ್ದರೆ ಅಂತಹ ಕಟ್ಟಡಗಳು ಮಾತ್ರ ತೆರವುಗೊಳ್ಳಲಿವೆ.

ಇದಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾಯಿದೆ 1976ರ ಕಲಂ 38 (ಸಿ)ಕ್ಕೆ ತಿದ್ದುಪಡಿ ಮಾಡಿ, ಹೊಸದಾಗಿ ಕಲಂ 38 (ಡಿ) ಸೇರ್ಪಡೆ ಮಾಡಲಾಗಿದೆ. ಇದರನ್ವಯ ಮರು ಮಂಜೂರಾತಿ ಮಾರ್ಗಸೂಚಿಗಳನ್ನು ಮಾಡಿ, ಈ ಕಟ್ಟಡಗಳನ್ನು ಸಕ್ರಮ ಮಾಡಿಕೊಳ್ಳಲು ಮಾರುಕಟ್ಟೆ ಮಾರ್ಗಸೂಚಿ ದರದಲ್ಲಿ ಬಿಡಿಎ ಮೌಲ್ಯವನ್ನು ನಿಗದಿಪಡಿಸಿದೆ. ಶೇ. 10 ರಿಂದ ಶೇ. 50ರವರೆಗೆ ಮಾರ್ಗಸೂಚಿ ದರವನ್ನು ನಿವೇಶನದ ಅಳತೆ ಮೇರೆಗೆ ನಿಗದಿಪಡಿಸಲಾಗಿದೆ. ಹೀಗಾಗಿ, 12 ವರ್ಷಗಳ ಹಿಂದೆ ಮನೆ ನಿರ್ಮಿಸಿ ವಾಸವಿರುವುದಕ್ಕೆ ಪೂರಕ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಿ ಸಕ್ರಮ ಮಾಡಿಕೊಳ್ಳಬಹುದು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬೆಂಗಳೂರಿನ ನಾನಾ ಬಡಾವಣೆಗಳಲ್ಲಿ ಭೂ ಸ್ವಾಧೀನಪಡಿಸಿಕೊಂಡಿರುವ ಜಾಗದಲ್ಲಿ ನಿರ್ಮಿಸಿಕೊಂಡ ಮನೆಗಳನ್ನು ಸಕ್ರಮ ಮಾಡಲು ಮುಂದಾಗಿದೆ. ನಗರದ 62 ಬಡಾವಣೆಗಳಲ್ಲಿ ಸುಮಾರು 10 ಸಾವಿರ ಕಟ್ಟಡಗಳನ್ನು ಗುರುತಿಸಲಾಗಿದೆ. ಈ ಕಟ್ಟಡಗಳನ್ನು ಸಕ್ರಮ ಮಾಡಿಕೊಳ್ಳಲು ಮಾರುಕಟ್ಟೆ ಮಾರ್ಗಸೂಚಿ ದರದಲ್ಲಿ ಬಿಡಿಎ ಮೌಲ್ಯ ನಿಗದಿಪಡಿಸಿದೆ. ಇದರಿಂದ ಸುಮಾರು ಒಂದು ಸಾವಿರ ಕೋಟಿಗೂ ಅಧಿಕ ಆದಾಯ ಬಿಡಿಎ ಖಜಾನೆಗೆ ಬರುವ ಸಾಧ್ಯತೆಯಿದೆ.

‘ಬಿ’ ಖಾತಾ ಕ್ಯಾತೆ ಅಂತ್ಯ ಸನ್ನಿಹಿತ, ಏನಿದು ಎ, ಬಿ-ಖಾತಾ? ಅದ್ಯಾಕೆ ಬೇಕು?
ಯಾವ ಅಳತೆಯ ನಿವೇಶನಕ್ಕೆ ಎಷ್ಟು ದರ

20/30 ಅಡಿ ಅಳತೆಯವರೆಗೆ ಮಾರ್ಗಸೂಚಿ ದರದ ಶೇ. 10ರಷ್ಟು, 20/30 ಅಡಿ ಅಳತೆ ಮೇಲೆ 30/40 ಅಡಿ ಅಳತೆಯವರೆಗೆ ಮಾರ್ಗಸೂಚಿ ದರದ ಶೇ. 25ರಷ್ಟು. 30/40 ಅಡಿ ಅಳತೆಯ ಮೇಲೆ 40/60 ಅಡಿ ಅಳತೆಯವರೆಗೆ ಮಾರ್ಗಸೂಚಿ ದರದ ಶೇ. 40ರಷ್ಟು ಹಾಗೂ 40/60 ಅಡಿ ಅಳತೆಯ ಮೇಲೆ 50/80 ಅಡಿ ಅಳತೆಯವರೆಗೆ ಮಾರ್ಗಸೂಚಿ ದರದ ಶೇ. 50ರಷ್ಟು ಹಾಗೂ ಶೇ. 5ರಷ್ಟು ನಿಗದಿತ ದಂಡದೊಂದಿಗೆ ಪಾವತಿಸಬೇಕು. ಮೂಲೆ ನಿವೇಶನಗಳಲ್ಲಿನ ಕಟ್ಟಡಗಳಾಗಿದ್ದಲ್ಲಿಈ ದರದ ಎರಡುಪಟ್ಟು ದಂಡ/ಮೌಲ್ಯ ಪಾವತಿಸಬೇಕು.

ಸಕ್ರಮಕ್ಕೆ ಬೇಕಾಗಿರುವ ದಾಖಲೆಗಳೇನು?

ಜಮೀನಿನ ಮೂಲ ಖಾತೆದಾರರಿಂದ ಖರೀದಿಸಲ್ಪಟ್ಟ ಕಂದಾಯ ನಿವೇಶನದಲ್ಲಿನ ಕ್ರಯ ಪತ್ರಗಳ ದೃಢೀಕೃತ ಪ್ರತಿ, ಇತ್ತೀಚಿನ ಕಂದಾಯ ರಸೀದಿ, ಸ್ವಪ್ರಮಾಣ ಪತ್ರ (ನೋಟರಿ ದೃಢೀಕೃತ), ಖಾತಾ ದೃಢೀಕರಣ ಪತ್ರ, ಖಾತಾ ನಕಲು, ಮಂಜೂರಾದ ಕಟ್ಟಡದ ನಕ್ಷೆ, ನೀರಿನ ಸಂಪರ್ಕ ಕಾರ್ಯಾದೇಶ, ವಿದ್ಯುಚ್ಛಕ್ತಿ ಸಂಪರ್ಕ ಕಾರ್ಯಾದೇಶ, ವಾಸದ ವಿಳಾಸಕ್ಕೆ ಪುರಾವೆ (ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಮತ್ತು ಇತರೆ) ಮತ್ತಿತರ ದಾಖಲೆಗಳನ್ನು ಹಾಗೂ ಶುಲ್ಕ ಪಾವತಿಸಬೇಕಾಗುತ್ತದೆ.

ಮೊದಲ ಹಂತದಲ್ಲಿಅರ್ಜಿ ಸಲ್ಲಿಸುವ ಬಡಾವಣೆಗಳು

ಮೊದಲ ಹಂತದಲ್ಲಿ ಪಿಳ್ಳಣ್ಣ ಗಾರ್ಡನ್‌, ಆರ್‌ಎಂವಿ, ಎಚ್‌ಆರ್‌ಬಿಆರ್‌, ಎಚ್‌ಎಸ್‌ಆರ್‌ ಬಡಾವಣೆಗಳಿಗೆ ಈಗಾಗಲೇ ನೋಟಿಸ್‌ ಜಾರಿಗೊಳಿಸಲಾಗಿದೆ. ನೋಟಿಸ್‌ ತಲುಪಿದ 2 ತಿಂಗಳೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಬಿಡಿಎ ಕಚೇರಿಯಲ್ಲಿ ತೆರೆಯಲಾಗಿರುವ ಕಿಯೋಸ್ಕ್‌ಗಳಲ್ಲಿ ಆನ್‌ಲೈನ್‌ ಮೂಲಕವೇ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿ ನಮೂನೆಗಳಿಗಾಗಿ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌: https://www.bdabangalore.org/ವೀಕ್ಷಿಸಬಹುದು. ಅರ್ಜಿಗಳನ್ನು ಆಫ್‌ಲೈನ್‌ ಮತ್ತು ಆನ್‌ಲೈನ್‌ ಎರಡೂ ವಿಧಾನದಲ್ಲಿ ಸಲ್ಲಿಸಬಹುದು ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದರು.

ಬೆಂಗಳೂರಿನ 62 ಬಡಾವಣೆಗಳಲ್ಲಿ ಸಹಸ್ರಾರು ಕಟ್ಟಡಗಳನ್ನು ಅಕ್ರಮ ಎಂದು ಗುರುತಿಸಲಾಗಿದೆ. ಇದೀಗ ಅಂತಹ ಕಟ್ಟಡಗಳನ್ನು ಸಕ್ರಮ ಮಾಡುವ ಉದ್ದೇಶದಿಂದ ಕಾಯಿದೆಗೆ ತಿದ್ದುಪಡಿ ತಂದು ಮಾರ್ಗಸೂಚಿ ದರ ನಿಗದಿಪಡಿಸುವ ಮೂಲಕ ಗ್ರಾಹಕರಿಗೆ ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಬಿಡಿಎ ಆಯುಕ್ತ ಎಂ.ಬಿ. ರಾಜೇಶ್‌ಗೌಡ ತಿಳಿಸಿದ್ದಾರೆ.Source link

Leave a Reply

Your email address will not be published.