ಹಳೇ ವಾಹನಗಳ ಮಾಲೀಕರಿಗೆ ಹೈಕೋರ್ಟ್‌ನಿಂದ ಗುಡ್‌ ನ್ಯೂಸ್‌! ಅಧಿಕ ಶುಲ್ಕ, ದಂಡದ ಆದೇಶಕ್ಕೆ ತಡೆ

Steelbird introduces new Blauer BET helmet series in India
Steelbird introduces new Blauer BET helmet series in India
May 13, 2022
Moscow says EU becoming ‘aggressive, militant’
Moscow says EU becoming ‘aggressive, militant’
May 13, 2022
ಹಳೇ ವಾಹನಗಳ ಮಾಲೀಕರಿಗೆ ಹೈಕೋರ್ಟ್‌ನಿಂದ ಗುಡ್‌ ನ್ಯೂಸ್‌! ಅಧಿಕ ಶುಲ್ಕ, ದಂಡದ ಆದೇಶಕ್ಕೆ ತಡೆ


ಬೆಂಗಳೂರು: ಹದಿನೈದು ವರ್ಷ ಹಳೆಯದಾದ ವಾಹನಗಳ ನೋಂದಣಿ ಮತ್ತು ಕ್ಷಮತಾ ಪ್ರಮಾಣಪತ್ರ (ಫಿಟ್ನೆಸ್‌ ಸರ್ಟಿಫಿಕೇಟ್‌) ನವೀಕರಣಕ್ಕೆ ವಿಧಿಸುತ್ತಿದ್ದ ಅಧಿಕ ಶುಲ್ಕ ಮತ್ತು ದಂಡದ ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ. ಕರ್ನಾಟಕ ಲಾರಿ ಮಾಲೀಕರ ಒಕ್ಕೂಟ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರಿದ್ದ ರಜಾ ಕಾಲದ ವಿಶೇಷ ನ್ಯಾಯಪೀಠ, ಈ ಆದೇಶ ನೀಡಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಮಧ್ಯಂತರ ಆದೇಶವನ್ನು ಹೊರಡಿಸಿ ಸರಕಾರ, ಸಾರಿಗೆ ಇಲಾಖೆ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.

“ಈ ವರ್ಷದ ಏಪ್ರಿಲ್‌ 1ರಿಂದ ಅನ್ವಯವಾಗುವಂತೆ 15 ವರ್ಷ ಮೇಲ್ಪಟ್ಟ ಎಲ್ಲ ಹಳೆಯ ವಾಹನಗಳ ದಂಡದ ಪ್ರಮಾಣದಲ್ಲಿ ಭಾರಿ ಏರಿಕೆ ಮಾಡಲಾಗಿದೆ. ನೋಂದಣಿ ಮತ್ತು ಕ್ಷಮತಾ ಪ್ರಮಾಣಪತ್ರಗಳ ನವೀಕರಣಕ್ಕೆ 10 ಸಾವಿರ ರೂ. ವಿಧಿಸಲಾಗುತ್ತಿದೆ. ಒಂದು ವೇಳೆ ಎಫ್‌ಸಿ ಅವಧಿ ಮುಕ್ತಾಯಗೊಂಡಿದ್ದರೆ ಸಾರಿಗೇತರ ವಾಹನಗಳಿಗೆ ತಿಂಗಳಿಗೆ ಹೆಚ್ಚುವರಿಯಾಗಿ 500 ರೂ. ದಂಡ ವಿಧಿಸಲಾಗುತ್ತಿದೆ. ಇದು ಅತ್ಯಂತ ದುಬಾರಿಯಾಗಿದ್ದು, ವಾಹನ ಸವಾರರಿಗೂ ನಿಜಕ್ಕೂ ತುಂಬಾ ಹೊರೆಯಾಗಿದೆ” ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನ ಸೆಳೆದಿದ್ದರು.

ಎಲ್ಲೆ ಮೀರಿದ ಹಣದುಬ್ಬರ 7.79% ಜಿಗಿತ, 8 ವರ್ಷಗಳಲ್ಲೇ ಗರಿಷ್ಠ, ಗ್ರಾಮೀಣ ಭಾಗದಲ್ಲೇ ಹೆಚ್ಚು ಬಿಸಿ
“ಅಲ್ಲದೆ, ಪ್ರತಿದಿನ ವಿಳಂಬಕ್ಕೂ ಅಧಿಕ ಶುಲ್ಕ ವಿಧಿಸಲಾಗುತ್ತಿದೆ. 10 ಸಾವಿರ ರೂ. ನೋಂದಣಿ ಮತ್ತು ನವೀಕರಣಕ್ಕೆ ನಿಗದಿಪಡಿಸಿದ್ದರೂ ಭಾರಿ ಸರಕು ವಾಹನಗಳಿಗೆ 1500 ರೂ. ಮತ್ತು ಮಧ್ಯಮ ಸರಕು ವಾಹನಗಳಿಗೆ 1300 ರೂ. ವಿಧಿಸಲಾಗುತ್ತಿದೆ. ಹಾಗಾಗಿ, ಹಳೆಯ ವಾಹನ ಹೊಂದಿರುವವರಿಗೆ ತೀವ್ರ ತೊಂದರೆಯಾಗುತ್ತಿದೆ” ಎಂದು ಅರ್ಜಿದಾರರು ತಮ್ಮ ಸಮಸ್ಯೆ ಹೇಳಿಕೊಂಡಿದ್ದರು.

ಇನ್ನೂ 2% ಜಿಗಿಯಲಿದೆ ರೆಪೊ ದರ? ಸಾಲಗಾರರಿಗೆ ಗಾಯದ ಮೇಲೆ ಬರೆ! ಠೇವಣಿದಾರರಿಗೆ ಲಾಭ!
“ಮೊದಲೇ ಹಳೆಯದಾಗಿರುವ ವಾಹನಗಳಿಗೆ ಅಷ್ಟು ದೊಡ್ಡ ಮೊತ್ತದ ದಂಡ ಕಟ್ಟಿ, ಅವುಗಳನ್ನು ನಿರ್ವಹಣೆ ಮಾಡುವುದು ಕಷ್ಟಕರ. ಮೊದಲೇ ತೈಲ ಬೆಲೆ ಗಗನಕ್ಕೆ ಏರಿದೆ. ಹಾಗಾಗಿ, ದಂಡ ಶುಲ್ಕ ಹೆಚ್ಚಳದ ಆದೇಶಕ್ಕೆ ತಡೆ ನೀಡಬೇಕು” ಎಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು.

ಕೂಡಲೇ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಿ: ಮಧ್ಯಪ್ರದೇಶಕ್ಕೆ ಸುಪ್ರೀಂ ಬೀಸಿದ ಚಾಟಿ ಕರ್ನಾಟಕಕ್ಕೂ ಅನ್ವಯ..?
ಏಪ್ರಿಲ್‌ 1 ರಿಂದ ಶುಲ್ಕ ಹೆಚ್ಚಳ!
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 2021ರ ಅಕ್ಟೋಬರ್‌ 4ರಂದು ಆದೇಶ ಹೊರಡಿಸಿ, 2022ರ ಏಪ್ರಿಲ್‌ 1ರಿಂದ ಜಾರಿಗೆ ಬರುವಂತೆ ದಂಡದ ಶುಲ್ಕವನ್ನು ಹೆಚ್ಚಳ ಮಾಡಿತ್ತು. 15 ವರ್ಷ ಮೇಲ್ಪಟ್ಟ ಕಾರ್‌ಗಳ ಪರವಾನಿಗೆ ನವೀಕರಣ ಶುಲ್ಕವನ್ನು 600 ರೂ.ನಿಂದ 5 ಸಾವಿರ ರೂಪಾಯಿಗೆ ಏರಿಕೆ ಮಾಡಲಾಗಿದೆ. ದ್ವಿಚಕ್ರ ವಾಹನಗಳ ಶುಲ್ಕವನ್ನು 300 ರೂ.ನಿಂದ 1000 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. 15 ವರ್ಷ ಮೇಲ್ಪಟ್ಟ ಬಸ್, ಟ್ರಕ್ ಗಳ ಸಾಮರ್ಥ್ಯ ದೃಢೀಕರಣ ನವೀಕರಣ ಶುಲ್ಕ 1500 ರೂ.ನಿಂದ 12,500 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ಇದು ವಾಹನ ಮಾಲೀಕರಿಗೆ ಭಾರೀ ದುಬಾರಿಯಾಗಿ ಪರಿಣಮಿಸುತ್ತಿದ್ದು, ತೈಲ ದರವೂ ಕೂಡ ಗಗನಕ್ಕೇರಿರುವ ಸಂದರ್ಭದಲ್ಲಿ ದುಬಾರಿ ದರವನ್ನು ಭರಿಸಲು ವಾಹನ ಮಾಲೀಕರಿಗೆ ಆಗುತ್ತಿಲ್ಲ.

10 ಸಾವಿರ ಕೊಟ್ರೆ ಯುವಕರಿಗೂ ಸಿಗುತ್ತೆ ವೃದ್ಧಾಪ್ಯ ವೇತನ: ಹಾವೇರಿಯಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯಲ್ಲೂ ಗೋಲ್‌ಮಾಲ್‌?Source link

Leave a Reply

Your email address will not be published.