ಸರ್ಕಾರದ ವಿರುದ್ದ ಮಾತನಾಡಿದ್ದಕ್ಕೆ ಅನುದಾನಕ್ಕೆ ಬ್ರೇಕ್‌: ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆರೋಪ

SBI staffer mistakenly transfers Rs 1.5 crore to wrong accounts
SBI staffer mistakenly transfers Rs 1.5 crore to wrong accounts
May 15, 2022
The week that was: Select Adani Group stocks, multiplex operators in focus
May 15, 2022


ಚಿತ್ತಾಪುರ (ಕಲಬುರಗಿ): ತಾವು ಸರಕಾರದ ವಿರುದ್ಧ ಮಾತನಾಡಿದ್ದಕ್ಕೆ ಅನುದಾನಕ್ಕೆ ಬ್ರೇಕ್‌ ಹಾಕಲಾಗುತ್ತಿದೆ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಆರೋಪಿಸಿದ್ದಾರೆ.

ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಮಲಕೂಡ ಗ್ರಾಮದಲ್ಲಿ ನಬಾರ್ಡ್ – 25 ಅನುದಾನದಲ್ಲಿ 48 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಶಾಲಾ ಕೋಣೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ಚಿತ್ತಾಪುರ ಮತ ಕ್ಷೇತ್ರಕ್ಕೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ. ಕ್ಷೇತ್ರದ ಅಭಿವೃದ್ದಿಗೆ ಬೇಕಾಗುವ ಅನುದಾನ ನೀಡುತ್ತಿಲ್ಲ. ಸರಕಾರದ ವಿರುದ್ದ ಮಾತನಾಡಿದ್ದಕ್ಕೆ ನನಗೆ ಈ ಬಹುಮಾನ ನೀಡಲಾಗುತ್ತಿದೆ ಎಂದರು.

ಪಿಎಸ್ಐ ಅಕ್ರಮದ ತನಿಖೆ ಸರಿಯಾದ ದಿಕ್ಕಲ್ಲಿ ಸಾಗ್ತಿಲ್ಲ: ಪ್ರಿಯಾಂಕ್ ಖರ್ಗೆ
ಅಕ್ರಮ ಪಿ ಎಸ್‌ ಐ ನೇಮಕಾತಿಯಲ್ಲಿ ನಡೆದಿರುವ ಹಗರಣ ಹೊರಗಡೆ ತಂದಿರುವುದಕ್ಕೆ ಸಿಐಡಿಯವರು ನನಗೆ ನೋಟಿಸ್‌ ನೀಡಿದ್ದಾರೆ. 57 ಸಾವಿರ ಯುವಕರ ಭವಿಷ್ಯದ ವಿಚಾರದಲ್ಲಿ ಸರಕಾರ ಗಂಭೀರತೆ ಪ್ರದರ್ಶಿಸುತ್ತಿಲ್ಲ. ಶಿಕ್ಷಣ ಪಡೆದುಕೊಂಡ ಯುವಕರು ಈ ದೇಶಕ್ಕೆ ಸುಭದ್ರ ಅಡಿಪಾಯವಾಗುತ್ತಾರೆ. ಹೀಗಾಗಿ ತಾವು ಶಿಕ್ಷಣಕ್ಕೆ ಅತಿ ಹೆಚ್ಚಿನ ಒತ್ತು ನೀಡಿದ್ದು, ಚಿತ್ತಾಪುರ ಹೊರವಲಯದಲ್ಲಿ ನಾಗಾವಿ ಶೈಕ್ಷಣಿಕ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅನುಕೂಲ ಮಾಡಿಕೊಡಲಾಗಿದೆ ಎಂದು ಹೇಳಿದರು. ಮಕ್ಕಳಿಗೆ ಶಿಕ್ಷಣದಲ್ಲಿ ಆಸಕ್ತಿ ಮೂಡಿಸುವಲ್ಲಿ ಪೋಷಕರ ಪಾತ್ರ ಹಿರಿದಾಗಿದೆ. ಈ ನಿಟ್ಟಿನಲ್ಲಿ ಮಕ್ಕಳನ್ನು ಜಾಗೃತರನ್ನಾಗಿ ಮಾಡಿ ವೈಜ್ಞಾನಿಕ ಮನೋಭಾವನೆ ಬೆಳೆಸಬೇಕು. ಆಗ ಮಾತ್ರ ಒಂದು ಸಧೃಡ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಪಕನೂರ ಮಾತನಾಡಿ, ಅಭಿವೃದ್ದಿ ವಿಚಾರದಲ್ಲಿ ಪ್ರಿಯಾಂಕ್‌ ಖರ್ಗೆ ಅವರನ್ನು ಮೀರಿಸುವಂತಹ ಮತ್ತೊಬ್ಬ ಶಾಸಕರಿಲ್ಲ. ಈ ಹಿಂದೆ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಪಕ್ಷದ ಶಾಸಕರಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಗುರಮಠಕಲ್‌ ಅಭಿವೃದ್ದಿಪಡಿಸಿರುವುದನ್ನು ನೋಡಿಕೊಂಡು ನಿಮ್ಮ ಕ್ಷೇತ್ರಗಳ ಅಭಿವೃದ್ಧಿ ಮಾಡಿ ಎನ್ನುತ್ತಿದ್ದರು. ಈಗ ಅದೇ ರೀತಿ ಖರ್ಗೆ ಅವರ ಪುತ್ರ ಪ್ರಿಯಾಂಕ್‌ ಅವರು ಕೂಡಾ ಚಿತ್ತಾಪುರ ಮತ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆಯನ್ನೇ ಹರಿಸುತ್ತಿದ್ದಾರೆ. ಹೀಗಾಗಿ ಇತರೆ ಪಕ್ಷದ ಶಾಸಕರು ಚಿತ್ತಾಪುರವನ್ನು ನೋಡಿಕೊಂಡು ಹೋಗಬೇಕು ಎಂದು ಅವರು ಸಲಹೆ ನೀಡಿದರು.

ಪಿಎಸ್‌ಐ ಹಗರಣ: ಆರಗ ಜ್ಞಾನೇಂದ್ರಗೆ ಪ್ರಿಯಾಂಕ್‌ ಖರ್ಗೆ ಪಂಚ ಪ್ರಶ್ನೆ!
ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲಪುರಕರ್‌, ತಾಪಂ ಮಾಜಿ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ, ಮುಖಂಡರಾದ ರಮೇಶ ಮರಗೋಳ, ಮನ್ಸೂರ್‌ ಪಟೇಲ್‌, ರಾಜಶೇಖರ ತಿಮ್ಮನಾಯಕ, ವಿರೂಪಾಕ್ಷಪ್ಪ ಗಡ್ಡದ್‌, ಗುಂಡು ಐನಾಪೂರ ಸೇರಿ ಅನೇಕರಿದ್ದರು.

ಮಲಕೂಡ – ತೊನಸನಹಳ್ಳಿ ನಡುವೆ ರಸ್ತೆ

ಮಲಕೂಡ – ತೊನಸನ ಹಳ್ಳಿ ನಡುವೆ ರಸ್ತೆ, ಹರಿಜನ ವಾಡಾದಿಂದ ಕೊನೆಯ ಮನೆಯವರೆಗೆ ಪೈಪ್‌ ಲೈನ್‌ ಸೇರಿ ಹಲವಾರು ಬೇಡಿಕೆಗಳನ್ನು ಗ್ರಾಮಸ್ಥರು ಸಲ್ಲಿಸಿದಾಗ ಪ್ರತಿಕ್ರಿಯಿಸಿದ ಅವರು, ತೊನಸನಹಳ್ಳಿ ರಸ್ತೆ ಮಾಡುತ್ತೇನೆ. ಆದರೆ, ಶೌಚಾಲಯಕ್ಕೆ ಸ್ವಲ್ಪ ಕಾಲಾವಕಾಶ ನೀಡಿ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದರು.

ಪಿಎಸ್ಐ ಅಕ್ರಮ ಹಗರಣದಲ್ಲಿ ಗೃಹಸಚಿವರು ಬಲಿಪಶು ಆಗುತ್ತಾರೆ: ಪ್ರಿಯಾಂಕ್ ಖರ್ಗೆ ಬಾಂಬ್Source link

Leave a Reply

Your email address will not be published.