ಸಂಪುಟ ಸರ್ಜರಿ ಸರ್ಕಸ್‌: ಸಂಘ ಪರಿವಾರ ಮೂಲದವರಿಗೆ ಅದೃಷ್ಟ? ಮಹತ್ವದ ಖಾತೆ ನೀಡಲು ಕೂಡ ಸಲಹೆ

Zoom is driving further into the customer service market
Zoom is driving further into the customer service market
May 13, 2022
AMCની કાર્યવાહી: અમદાવાદમાં 3 મહિનામાં એસ્ટેટ વિભાગે 20 પ્લોટના દબાણો દૂર કર્યા, 121 કરોડના પ્લોટ કબ્જામાં લીધા
AMCની કાર્યવાહી: અમદાવાદમાં 3 મહિનામાં એસ્ટેટ વિભાગે 20 પ્લોટના દબાણો દૂર કર્યા, 121 કરોડના પ્લોટ કબ્જામાં લીધા
May 13, 2022


ಬೆಂಗಳೂರು: ಚುನಾವಣೆ ಸಿದ್ಧತೆ ದೃಷ್ಟಿಯಿಂದ ಈ ಬಾರಿಯ ಸಂಪುಟ ವಿಸ್ತರಣೆ ವೇಳೆ ಸಂಘ ಪರಿವಾರ ಮೂಲದ ಶಾಸಕರಿಗೆ ಆದ್ಯತೆ ನೀಡಲು ಚಿಂತನೆ ನಡೆಸಲಾಗಿದೆ. ಜತೆಗೆ ಇಂಥವರಿಗೆ ಮಹತ್ವದ ಖಾತೆ ನೀಡಬೇಕು ಎಂಬ ಸಲಹೆಯೂ ಕೇಳಿ ಬಂದಿದೆ.

ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎಂಬ ಚಿತ್ರಣ ಲಭ್ಯವಾಗಿಲ್ಲ. ಆದರೆ, ಶೀಘ್ರದಲ್ಲೇ ಸಂಪುಟಕ್ಕೆ ಸರ್ಜರಿಯಾಗುವುದಂತೂ ಖಚಿತ. ಅದರ ಸ್ವರೂಪ ಹೇಗಿರಲಿದೆ ಎನ್ನುವುದು ಹೈಕಮಾಂಡ್‌ನ ತೀರ್ಮಾನ ಪ್ರಕಟವಾದ ಬಳಿಕವೇ ಗೊತ್ತಾಗಲಿದೆ. ಇದರ ಮಧ್ಯೆ ಸಂಘ ಪರಿವಾರದ ಮೂಲದವರು ಹಾಗೂ ಪಕ್ಷ ನಿಷ್ಠರಿಗೆ ಅವಕಾಶ ನೀಡಬೇಕು ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.

ಕಳೆದ ಬಾರಿ ಸಂಪುಟ ವಿಸ್ತರಣೆ ಕೈಗೊಳ್ಳುವಾಗ ಸಂಘ ಪರಿವಾರ ಮೂಲದ ಆರಗ ಜ್ಞಾನೇಂದ್ರ, ವಿ ಸುನೀಲ್‌ ಕುಮಾರ್‌, ಬಿಸಿ ನಾಗೇಶ್‌ ಮತ್ತಿತರರಿಗೆ ಅವಕಾಶ ನೀಡಲಾಗಿತ್ತು. ಜತೆಗೆ ಅದಾಗಲೇ ಸಚಿವರಾಗಿ ಮುಜರಾಯಿ ಖಾತೆ ನೋಡಿಕೊಳ್ಳುತ್ತಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮಹತ್ವದ ಸಮಾಜ ಕಲ್ಯಾಣ ಇಲಾಖೆ ವಹಿಸಲಾಗಿತ್ತು. ಆರ್‌ಎಸ್‌ಎಸ್‌ ಶಿಫಾರಸಿನ ಮೇರೆಗೆ ಪಕ್ಷದ ವರಿಷ್ಠರು ಈ ಸಂಬಂಧ ಸೂಚನೆ ನೀಡಿದ್ದರು. ಅದರಂತೆ ಮುಖ್ಯಮಂತ್ರಿಯವರು ಕ್ರಮ ಕೈಗೊಂಡಿದ್ದರು ಎಂದು ಹೇಳಲಾಗಿತ್ತು.

ದಿಢೀರ್‌ ದಿಲ್ಲಿಗೆ ತೆರಳಿದ ಆರಗ ಜ್ಞಾನೇಂದ್ರ! ಗುರುವಾರವೇ ಸಂಪುಟಕ್ಕೆ ಸರ್ಜರಿ? ಕುತೂಹಲ ಕೆರಳಿಸಿದ ಬೆಳವಣಿಗೆ!
ಈಗ ಮತ್ತೊಮ್ಮೆ ಇದೇ ವಿಚಾರ ಚರ್ಚೆಗೆ ಬಂದಿದೆ. ಸಂಘ ಪರಿವಾರದ ಗರಡಿಯಲ್ಲಿ ಪಳಗಿದವರು, ಪಕ್ಷ ನಿಷ್ಠರಿಗೆ ಮಂತ್ರಿ ಸ್ಥಾನ ನೀಡಿದರೆ ಸರಕಾರದ ವರ್ಚಸ್ಸು ಹೆಚ್ಚುತ್ತದೆ. ಪಕ್ಷದ ನೀತಿ, ಸಿದ್ಧಾಂತದ ಅನ್ವಯ ಕಾರ್ಯಕ್ರಮ ಜಾರಿಗೊಳಿಸಲು ಈ ಸಚಿವರುಗಳು ಶ್ರಮ ವಹಿಸುತ್ತಾರೆ. ಇದರಿಂದ ಕಾರ್ಯಕರ್ತರಲ್ಲೂ ಉತ್ಸಾಹ ಬರುತ್ತದೆ ಎಂಬ ಅಭಿಪ್ರಾಯ ಪಕ್ಷದೊಳಗೆ ಕೇಳಿ ಬಂದಿದೆ. ಸಂಘ ಪರಿವಾರದ ಪ್ರಮುಖರು ಕೂಡ ಈ ಸಂಬಂಧದಲ್ಲಿ ಈಗಾಗಲೇ ಹೈಕಮಾಂಡ್‌ ಗಮನ ಸೆಳೆದಿದ್ದಾರೆ. ವರಿಷ್ಠರು ಮನಸ್ಸಿನಲ್ಲೂಇದೇ ಚಿಂತನೆಯಿದೆ ಎಂದು ಹೇಳಲಾಗಿದೆ.

ಬೊಮ್ಮಾಯಿಗೆ ಸಿಗದ ಅಮಿತ್‌ ಶಾ, ಜೆಪಿ ನಡ್ಡಾ ಭೇಟಿ ಅವಕಾಶ! ಮತ್ತಷ್ಟು ಕಗ್ಗಂಟಾದ ಸಂಪುಟ ಸರ್ಕಸ್!
ಹಾಲಿಗಳಿಗೂ ಹೆಚ್ಚಿನ ಹೊಣೆ!
ಹಾಲಿ ಸಚಿವರಲ್ಲೂ ಸಂಘ ಪರಿವಾರ ಮೂಲದವರು, ಪಕ್ಷ ನಿಷ್ಠರಿಗೆ ಹೆಚ್ಚಿನ ಜವಾಬ್ದಾರಿ ದೊರಕುವ ನಿರೀಕ್ಷೆಯಿದೆ. ಸರಕಾರಕ್ಕೆ ಹೆಸರು ತರಬಹುದಾದ ಇಲಾಖೆಗಳಿಗೆ ಸಂಘ ನಿಷ್ಠರನ್ನೇ ನಿಯೋಜಿಸುವುದು ಸೂಕ್ತ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಈ ಆಶಯ ಜಾರಿಯಾದರೆ ಕೆಲ ಸಚಿವರ ಖಾತೆ ಬದಲಾವಣೆಯಾಗುವ ಸಾಧ್ಯತೆ ಇರುತ್ತದೆ. ಆದರೆ, ಸಂಪುಟ ಸರ್ಜರಿ ಹೆಸರಿನಲ್ಲಿಅನಗತ್ಯ ಗೊಂದಲವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂಬ ಮಾತುಗಳೂ ಕೇಳಿ ಬರುತ್ತಿವೆ.

3 ದಿನಗಳಲ್ಲಿ ಸಂಪುಟ ಸರ್ಜರಿ : ನಾಯಕರೊಂದಿಗೆ ಚರ್ಚಿಸಿ ಮಾಹಿತಿ ನೀಡುತ್ತೇನೆ ಎಂದು ಅಮಿತ್‌ ಶಾ ಹೇಳಿದ್ದಾರೆ : ಬೊಮ್ಮಾಯಿ
ಎರಡು, ಮೂರು ದಿನದಲ್ಲಿ ನಿರ್ಧಾರ?
ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷ ಇದೆ. ಈ ಹಿನ್ನೆಲೆ ಸಚಿವ ಸಂಪುಟದಲ್ಲಿ ಖಾಲಿಯಿರುವ 5 ಸ್ಥಾನಗಳನ್ನು ಭರ್ತಿ ಮಾಡಲು ಉದ್ದೇಶಿಸಲಾಗಿದೆ. ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಚರ್ಚೆ ನಡೆಸಿದ್ದು, ಇನ್ನು ಎರಡು ಮೂರು ದಿನದಲ್ಲಿ ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎಂಬುದು ಗೊತ್ತಾಗಲಿದೆ.

ಆಝಾನ್‌ Vs ಭಜನೆ ವಿವಾದದಲ್ಲಿ ಸರ್ಕಾರಕ್ಕೆ ಬದ್ಧತೆ ಇದೆ: ಶೀಘ್ರವೇ ನಿರ್ಧಾರ ಪ್ರಕಟ ಮಾಡುತ್ತೇವೆ- ಗೃಹ ಸಚಿವ ಆರಗ ಜ್ಞಾನೇಂದ್ರSource link

Leave a Reply

Your email address will not be published.