‘ರಾಹುಲ್ ಗಾಂಧಿ ಒಳ್ಳೆಯ ವ್ಯಕ್ತಿ’: ಕಾಂಗ್ರೆಸ್‌ಗೆ ‘ಗುಡ್‌ಬೈ’ ಹೇಳಿದ ಹಿರಿಯ ನಾಯಕನ ಹೊಗಳಿಕೆ

Ex-DHFL promoters Wadhawan brothers get bail in multi-crore scam
Ex-DHFL promoters Wadhawan brothers get bail in multi-crore scam
May 14, 2022
હવે વિદેશી લીંબુ ગુજરાત આવશે: અમદાવાદમાં સાઉથના લીંબુ ખૂટી પડ્યા તો તુર્કીથી મંગાવ્યા, 90 રૂપિયે કિલોના ભાવે આયાત કરી
હવે વિદેશી લીંબુ ગુજરાત આવશે: અમદાવાદમાં સાઉથના લીંબુ ખૂટી પડ્યા તો તુર્કીથી મંગાવ્યા, 90 રૂપિયે કિલોના ભાવે આયાત કરી
May 14, 2022


ಹೊಸದಿಲ್ಲಿ: ಪಂಜಾಬ್‌ನಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌ನಿಂದ ಮತ್ತೊಂದು ನಾಯಕ ನಿರ್ಗಮಿಸಿದ್ದಾರೆ. ರಾಜ್ಯ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಸುನಿಲ್ ಜಾಖರ್ ಅವರು ತಾವು ಪಕ್ಷ ತೊರೆಯುವುದಾಗಿ ಶನಿವಾರ ಘೋಷಿಸಿದ್ದಾರೆ. ಪಕ್ಷದಿಂದ ತಮ್ಮನ್ನು ಎರಡು ವರ್ಷ ಅಮಾನತುಗೊಳಿಸಿದ ಬೆನ್ನಲ್ಲೇ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ನೇರ ಪ್ರಸಾರದಲ್ಲಿ ಮಾತನಾಡಿದ ಸುನಿಲ್ ಜಾಖರ್, “ಗುಡ್ ಲಕ್ ಮತ್ತು ಗುಡ್‌ಬೈ ಕಾಂಗ್ರೆಸ್” ಎಂದು ಹೇಳಿದರು.
‘ಆತ್ಮಸಾಕ್ಷಿ ಇರುವವರ ತಲೆ ಕಡಿಯಲಾಗುತ್ತದೆ’: ಕಾಂಗ್ರೆಸ್ ವಿರುದ್ಧ ಮುಗಿಬಿದ್ದ ಹಿರಿಯ ನಾಯಕ ಜಖಾರ್ ಅಮಾನತು!

ತಮಗೆ ಬಹಳ ಬೇಸರ ಮತ್ತು ನೋವು ಉಂಟಾಗಿದೆ ಎಂದಿರುವ ಸುನಿಲ್, ಕಾಂಗ್ರೆಸ್ ಬಗ್ಗೆ ‘ಅಯ್ಯೋ ಪಾಪ’ ಎನಿಸುತ್ತದೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಶನಿವಾರ ತಮ್ಮ ‘ದಿಲ್‌ ಕಿ ಬಾತ್’ (ಹೃದಯದ ಮಾತು) ಆಡುವುದಾಗಿ ಜಖಾರ್ ಅವರು ಶುಕ್ರವಾರ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದರು. ಅದೇ ಶೀರ್ಷಿಕೆಯೊಂದಿಗೆ ಶನಿವಾರದ ಫೇಸ್‌ಬುಕ್ ಲೈವ್ ಸೆಷನ್ ಅನ್ನು ಹಂಚಿಕೊಂಡಿದ್ದರು.

ರಾಜಸ್ಥಾನದ ಉದಯಪುರದಲ್ಲಿ ಕಾಂಗ್ರೆಸ್ ಪಕ್ಷದ ಚಿಂತನ ಶಿಬಿರ ನಡೆಯುತ್ತಿರುವ ಸಂದರ್ಭದಲ್ಲಿಯೇ ಪಕ್ಷದ ಹಿರಿಯ ನಾಯಕರ ನಿರ್ಗಮನವಾಗಿದೆ.

“ಕಾಂಗ್ರೆಸ್ ವಾಸ್ತವವಾಗಿ ‘ಚಿಂತಾ ಶಿಬಿರ’ ನಡೆಸಬೇಕಿತ್ತೇ ವಿನಾ, ‘ಚಿಂತನ ಶಿಬಿರ’ ಅಲ್ಲ” ಎಂದು ವ್ಯಂಗ್ಯವಾಡಿರುವ ಅವರು, ಈ ಕಾರ್ಯಕ್ರಮ ಕೇವಲ ಔಪಚಾರಿಕತೆಗೆ ನಡೆಯುತ್ತಿದೆ ಎಂದಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕತ್ವಕ್ಕೆ ಪಕ್ಷವನ್ನು ಉಳಿಸುವುದು ಹೇಗೆ ಎಂಬ ದಾರಿಗಳನ್ನು ಕಂಡುಕೊಳ್ಳುವುದು ಗೊತ್ತಿಲ್ಲ ಅಥವಾ ಅದರ ಬಯಕೆಯೂ ಇಲ್ಲ ಎಂದು ಟೀಕಿಸಿದ್ದಾರೆ.
ಅಲ್ಪಸಂಖ್ಯಾತರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ: ಕೇಂದ್ರದ ವಿರುದ್ಧ ಸೋನಿಯಾ ವಾಗ್ದಾಳಿ

“ಉತ್ತರ ಪ್ರದೇಶ ಚುನಾವಣೆಯಲ್ಲಿ ಏಕೆ ಅಷ್ಟು ಹೀನಾಯವಾಗಿ ಸೋಲು ಎದುರಾಯಿತು ಎಂದು ಕಾರಣಗಳನ್ನು ಹುಡುಕಲು ಕಾಂಗ್ರೆಸ್ ಹೆಚ್ಚುವರಿ ಸಮಿತಿಯನ್ನು ರಚನೆ ಮಾಡಬೇಕಿತ್ತು” ಎಂದಿರುವ ಅವರು, ಕಾಂಗ್ರೆಸ್ ಸೋಲಿಗೆ ಹರೀಶ್ ರಾವತ್ ಅವರು ಕಾರಣ ಎಂದು ದೂಷಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ವಿರುದ್ಧ ಕೂಡ ಹರಿಹಾಯ್ದಿರುವ ಜಖಾರ್, ರಾಜಕೀಯ ಆಟದಿಂದ ಪಂಜಾಬ್ ಅನ್ನು ಉಳಿಸುವಂತೆ ಅವರಿಗೆ ಮನವಿ ಮಾಡಿದ್ದಾರೆ. ರಾಜ್ಯವು ಈಗಾಗಲೇ ಸಾಕಷ್ಟು ಕರಾಳ ದಿನಗಳನ್ನು ಕಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಿಲ್ಲಿಯಲ್ಲಿ ಕುಳಿತವರು ಪಂಜಾಬ್‌ನಲ್ಲಿ ಪಕ್ಷವನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಆದರೆ ರಾಹುಲ್ ಗಾಂಧಿ ಅವರನ್ನು ‘ಒಳ್ಳೆಯ ವ್ಯಕ್ತಿ’ ಎಂದು ಶ್ಲಾಘಿಸಿರುವ ಅವರು, ಪಕ್ಷವನ್ನು ರಾಹುಲ್ ಗಾಂಧಿ ಅವರು ಮತ್ತೆ ತಮ್ಮ ನಿಯಂತ್ರಣಕ್ಕೆ ಪಡೆದುಕೊಳ್ಳಬೇಕು ಹಾಗೂ ಅವರು ಸೈಕೋಪಾತ್‌ಗಳಿಂದ ತಮ್ಮನ್ನು ದೂರ ಇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.Source link

Leave a Reply

Your email address will not be published.