ಮುಂದಿನ ಎಲೆಕ್ಷನ್‌ನಲ್ಲಿ ದ.ಕ ಜಿಲ್ಲೆಯ ಎಲ್ಲ 8 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲು ಪ್ರಯತ್ನ: ವೇದವ್ಯಾಸ್‌ ಕಾಮತ್‌

Shark Tank India: Sippline founder subtly hits back at Ashneer Grover — Watch
Shark Tank India: Sippline founder subtly hits back at Ashneer Grover — Watch
May 15, 2022
LIC listing, FII outflow among 5 factors that will steer market this week
May 15, 2022


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭೆ ಕ್ಷೇತ್ರಗಳಲ್ಲಿ ಹಾಲಿ 7 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದು, ಮುಂದಿನ ವರ್ಷ ನಡೆಯುವ ವಿಧಾನ ಸಭೆ ಚುನಾವಣೆಯಲ್ಲಿ ಎಲ್ಲ 8 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವಂತೆ ಮಾಡಬೇಕು. ಅದಕ್ಕಾಗಿ ವಿವಿಧ ಪ್ರಕೋಷ್ಠಗಳು ಗರಿಷ್ಠ ಪ್ರಮಾಣದಲ್ಲಿ ಕೆಲಸ ಮಾಡಬೇಕು ಎಂದು ಶಾಸಕ ಡಿ ವೇದವ್ಯಾಸ್‌ ಕಾಮತ್‌ ತಿಳಿಸಿದ್ದಾರೆ.

ನಗರದ ಸುಧೀಂದ್ರ ಆಡಿಟೋರಿಯಂನಲ್ಲಿ ಶನಿವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಕೋಷ್ಠಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ‘ಬಿಜೆಪಿ ಅಧಿಕಾರದಲ್ಲಿ ಇರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಕರ್ತರಿಗೆ, ಜನತೆಗೆ ತಲುಪಿಸುವಲ್ಲಿ ಜಿಲ್ಲಾ ಹಾಗೂ ಮಂಡಲ ಪ್ರಕೋಷ್ಠಗಳ ಪದಾಧಿಕಾರಿಗಳ ಜವಾಬ್ದಾರಿ ಪ್ರಮುಖವಾದ್ದು. ಅಭಿವೃದ್ಧಿ ವಿಚಾರದಲ್ಲಿ ಪ್ರತಿಪಕ್ಷಗಳ ಟೀಕೆಗಳಿಗೆ ಆಯಾ ಪ್ರಕೋಷ್ಠಗಳು ಸೂಕ್ತ ಉತ್ತರ ನೀಡಬೇಕು. ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಪ್ರಕೋಷ್ಠಗಳ ಜವಾಬ್ದಾರಿ ವಹಿಸಿದವರು ಗರಿಷ್ಠ ಪ್ರಮಾಣದಲ್ಲಿ ಕೆಲಸ ಮಾಡಬೇಕು ಎಂದರು.
ಮೇಲ್ಮನೆಗೆ ವಿಜಯೇಂದ್ರ ಹೆಸರು ಅಂತಿಮ? ಯುವ ನಾಯಕತ್ವಕ್ಕೆ ಹೈ ಕಮಾಂಡ್‌ ವಿಶೇಷ ಲಕ್ಷ್ಯ
ಜಗತ್ತಿನಲ್ಲೇ ಬಿಜೆಪಿ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾಗಿದ್ದು, ಕೇಂದ್ರ ಹಾಗೂ ರಾಜ್ಯಗಳಲ್ಲಿ ಪಕ್ಷವಾಗಿ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಂಘಟನಾತ್ಮಕವಾಗಿ ಹಾಗೂ ಸರಕಾರದ ಅಭಿವೃದ್ಧಿ ವಿಚಾರಗಳನ್ನು ಜನತೆಗೆ ಮನದಟ್ಟು ಮಾಡುವ ಸಲುವಾಗಿ ವಿವಿಧ ಪ್ರಕೋಷ್ಠಗಳನ್ನು ರಚಿಸಲಾಗಿದೆ. ಸರಕಾರದ ಸಾಧನೆಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಮನ್ನಣೆ ವ್ಯಕ್ತವಾಗುತ್ತಿದೆ. ಪಕ್ಷ ಸಂಘಟನೆ ಹಾಗೂ ಪ್ರಚಾರದ ಕೆಲಸಕ್ಕೆ ಹೆಗಲು ಕೊಡುವ ಹೊಣೆಗಾರಿಕೆ ಪ್ರಕೋಷ್ಠಗಳಿಗೆ ಇದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವಿಧ 20 ಪ್ರಕೋಷ್ಠಗಳ ಮೂಲಕ ಜಿಲ್ಲೆಯಲ್ಲಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಲಾಗುತ್ತಿದೆ. ಇದರಿಂದಾಗಿ ಜಿಲ್ಲೆಯ ದೊಡ್ಡ ರಾಜಕೀಯ ಶಕ್ತಿಯಾಗಿ ಬಿಜೆಪಿ ಹೊರಹೊಮ್ಮಲು ಸಾಧ್ಯವಾಗಿದೆ ಎಂದರು. ಬಿಜೆಪಿ ಪರ ಹಾಗೂ ರಾಷ್ಟ್ರವಾದಿ ಚಿಂತನೆ ಹೊಂದಿರುವವರನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲು ಪ್ರಕೋಷ್ಠಗಳನ್ನು ರಚಿಸಲಾಗುತ್ತದೆ. ಪಕ್ಷದ ತತ್ವಸಿದ್ಧಾಂತ, ನೀತಿ, ನಡವಳಿಕೆಗೆ ಬದ್ಧವರಾಗಿ ಬರುವವರನ್ನು ಪಕ್ಷಕ್ಕೆ ಆಹ್ವಾನಿಸಲಾಗುತ್ತದೆ. ಇದರಿಂದಾಗಿ ಬಿಜೆಪಿಗೆ ಇನ್ನಷ್ಟು ಶಕ್ತಿ ಬರಲಿದೆ ಎಂದರು.
ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ: ಪರಿಷತ್‌, ರಾಜ್ಯಸಭಾ ಚುನಾವಣಾ ಸಿದ್ಧತೆ ಬಗ್ಗೆ ಚರ್ಚೆ
ಜಾಗತಿಕ ಮಟ್ಟದಲ್ಲಿ ಹಲವು ದೇಶಗಳು ಭಾರತದಲ್ಲಿ ಆಗಮಿಸಿ ರಾಜಕೀಯವಾಗಿ ಬಿಜೆಪಿ ಪಕ್ಷದ ಬಗ್ಗೆ ಅಧ್ಯಯನಕ್ಕೆ ಮುಂದಾಗಿವೆ. ಬಿಜೆಪಿ ಪಕ್ಷ ಸಂಘಟನೆ, ನಾಯಕತ್ವ, ದೇಶಕ್ಕೆ ಸಮಸ್ಯೆ ಬಂದಾಗ ಎದುರಿಸುವ ಛಾತಿ ಇತ್ಯಾದಿಗಳ ಬಗ್ಗೆ ಅಂತಾರಾಷ್ಟ್ರೀಯವಾಗಿ ವಿವಿಧ ರಾಜಕೀಯ ಪಕ್ಷಗಳು ಅಧ್ಯಯನ ಆಸಕ್ತಿ ತಳೆದಿವೆ. ಈಗ ಚೀನಾ ಕೂಡ ಭಾರತದ ಜತೆ ಬಾಂಧವ್ಯಕ್ಕೆ ಗುಟ್ಟಾಗಿ ಹೆಜ್ಜೆ ಇರಿಸಿದೆ. ಇದು ಭಾರತದ ಹಿರಿತನಕ್ಕೆ ಸಾಕ್ಷಿಯಾಗಿದೆ ಎಂದರು.

ರಾಜ್ಯ ಪ್ರಕೋಷ್ಠಗಳ ಸಂಚಾಲಕ ಭಾನುಪ್ರಕಾಶ್‌, ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ಸಿಂಹ ನಾಯಕ್‌, ರಾಜ್ಯ ಸಹಸಂಚಾಲಕ ಗುಂಜೂರು ಚರಣ್‌ ಉಪಸ್ಥಿತರಿದ್ದರು. ಕೈಗಾರಿಕಾ ಪ್ರಕೋಷ್ಠ ರಾಜ್ಯ ಸಂಚಾಲಕ ಪ್ರದೀಪ್‌ ಜಿ.ಪೈ ಸ್ವಾಗತಿಸಿದರು. ಜಿಲ್ಲಾ ಸಂಚಾಲಕ ಕೃಷ್ಣ ಶೆಟ್ಟಿ ಕಡಬ ವಂದಿಸಿದರು. ಸಭಾ ಕಾರ್ಯಕ್ರಮಗಳ ಬಳಿಕ ಸಂಘಟನೆಯಲ್ಲಿ ಪ್ರಕೋಷ್ಠಗಳ ಪಾತ್ರ ಮತ್ತು 2014ರ ನಂತರ ಭಾರತ ಕಂಡ ಬದಲಾವಣೆ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಮಾತನಾಡಿದರು.Source link

Leave a Reply

Your email address will not be published.