ಬೇಲ್‌ ಮೇಲೆ ಹೊರಗಿರೋ ಹುಡುಗ ನನ್ನ ಪ್ರಾಮಾಣಿಕತೆ ಪ್ರಶ್ನಿಸ್ತಾನೆ: ನಲಪಾಡ್‌ ವಿರುದ್ಧ ರಮ್ಯಾ ಕಿಡಿ

Ultimaker and MakerBot merge into a 3D printing giant
Ultimaker and MakerBot merge into a 3D printing giant
May 12, 2022
“Radical” ruling lets Texas ban social media moderation based on “viewpoint”
May 12, 2022


ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಹಾಗೂ ಅವರ ಬೆಂಬಲಿಗರ ಮೇಲೆ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಸಮರ ಸಾರಿದಂತೆ ಕಾಣುತ್ತಿದೆ. ರಮ್ಯಾ ಟ್ವೀಟ್‌ ಬೆನ್ನಲ್ಲೇ ಇಷ್ಟು ದಿನ ರಮ್ಯಾ ಎಲ್ಲಿದ್ದರೂ, ಈಗ ತನ್ನ ಅಸ್ತಿತ್ವ ತೋರಿಸಲು ಬಂದಿದ್ದಾರಾ ಎಂದು ಪ್ರಶ್ನಿಸಿದ್ದ ಮೊಹಮದ್‌ ನಲಪಾಡ್‌ಗೆ ತಿರುಗೇಟು ನೀಡಿರುವ ರಮ್ಯಾ, ಜಾಮೀನಿನ ಮೇಲೆ ಹೊರಗಿರುವ ಹುಡುಗ ನನ್ನ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿದ್ದಾನೆ ಎಂದು ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ರಮ್ಯಾ, ಜಾಮೀನಿನ ಮೇಲೆ ಹೊರಗಿರುವ ಈ ಹುಡುಗ ಮೊಹಮದ್‌ ನಲಪಾಡ್‌, ಕರ್ನಾಟಕ ಯುವ ಕಾಂಗ್ರೆಸ್‌ನ ಗೌರವಾನ್ವಿತ ಅಧ್ಯಕ್ಷರು, ಶಾಸಕ ಎನ್‌ಎ ಹ್ಯಾರಿಸ್‌ ಅವರ ಪುತ್ರ. ಅವರು ನನ್ನ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿದ್ದಾರೆ. ಇದು ಅದ್ಭುತ ಎಂದಿದ್ದಾರೆ. ಅದಲ್ಲದೇ ನಲಪಾಡ್‌ ವಿರುದ್ಧ ಕೇಳಿಬಂದಿರುವ ಆರೋಪಗಳ ವರದಿಗಳನ್ನು ಕೂಡ ಲಗತ್ತಿಸಿದ್ದಾರೆ.

ರಮ್ಯಾ ವಿರುದ್ಧ ಕಿಡಿಕಾರಿದ್ದ ನಲಪಾಡ್‌!
ಡಿಕೆ ಶಿವಕುಮಾರ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದ ರಮ್ಯಾ ವಿರುದ್ಧ ಮೊಹಮದ್‌ ನಲಪಾಡ್‌ ಕಿಡಿಕಾರಿದ್ದರು. ಉಡುಪಿಯಲ್ಲಿ ಮಾತನಾಡಿದ್ದ ಅವರು, ರಮ್ಯಾ ಇಷ್ಟು ದಿನ ಎಲ್ಲಿದ್ದರೂ ಅಂತ ನನಗೂ ಗೊತ್ತಿಲ್ಲ, ಇಷ್ಟು ತಿಂಗಳು ಇಷ್ಟು ವರ್ಷ ರಮ್ಯಾ ಎಲ್ಲಿದ್ದರೂ ಏನೋ? ಎಲ್ಲೂ ಇಲ್ಲದ ರಮ್ಯಾ ಸಡನ್ನಾಗಿ ಯಾಕೆ ಪ್ರತ್ಯಕ್ಷರಾದ್ರೋ ಗೊತ್ತಿಲ್ಲ, ರಮ್ಯಾ ತನ್ನ ಅಸ್ತಿತ್ವ ತೋರಿಸಲು ಬಂದಿದ್ದಾರಾ? ನಾನು ಒಬ್ಬಳು ಇದೀನಿ ಅಂತ ತೋರಿಸಿಕೊಳ್ಳುತ್ತಿದ್ದಾರಾ? ಎಂದು ಪ್ರಶ್ನಿಸಿದ್ದರು.

ಎಂಬಿ ಪಾಟೀಲ್‌ ಬಗ್ಗೆ ಡಿಕೆ ಶಿವಕುಮಾರ್‌ ಹೇಳಿಕೆಗೆ ರಮ್ಯಾ ಅಚ್ಚರಿ! ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕಲ್ಲವೇ ಎಂದು ಪ್ರಶ್ನೆ
ಅದಲ್ಲದೇ, ಯಾವುದಾದರೂ ಒಂದು ಕುರ್ಚಿ ಮೇಲೆ ಟವಲ್ ಹಾಕಲು ರಮ್ಯಾ ಬಂದಿದ್ದಾರಾ? ರಮ್ಯಾ ಬಂದದ್ದು ಯಾಕೆ; ಹೀಗೆಲ್ಲ ಮಾಡುತ್ತಿರುವುದು ಯಾವುದಕ್ಕೆ ಅಂತ ನಾವು ಮೊದಲು ಅರ್ಥಮಾಡಿಕೊಳ್ಳಬೇಕು. ನಾನು ರಮ್ಯಾ ಅವರ ವಿರುದ್ಧ ಇಲ್ಲ, ನಟಿ ರಮ್ಯಾ ಇಂತಹ ಚೀಪ್ ಪಾಲಿಟಿಕ್ಸ್ ಮಾಡಬಾರದು. ಅವರ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ಮೊಹಮದ್‌ ನಲಪಾಡ್‌ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ರಮ್ಯಾ ಜಾಮೀನು ಮೇಲೆ ಹೊರಗಿರುವ ಹುಡುಗ ನನ್ನ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿದ್ದಾನೆ ಎಂದಿದ್ದಾರೆ.

ನಿಮಗೆ ಆ ತೊಂದರೆ ಬೇಡ! ನನ್ನ ನಾನೇ ಟ್ರೋಲ್‌ ಮಾಡ್ಕೋತಿನಿ: ಡಿಕೆಶಿ ವಿರುದ್ಧ ಸಿಡಿದೆದ್ದ ರಮ್ಯಾ
ರಮ್ಯಾ VS ಡಿಕೆಶಿ ಸಮರ!
ಮಾಜಿ ಸಚಿವ ಎಂಬಿ ಪಾಟೀಲ್‌ ಹಾಗೂ ಸಚಿವ ಸಿಎನ್‌ ಅಶ್ವತ್ಥ್‌ ನಾರಾಯಣ ಅವರು ಭೇಟಿ ಮಾಡಿದ್ದಾರೆ ಎಂದು ಹೇಳಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ವಿರುದ್ಧ ರಮ್ಯಾ ಅಸಮಾಧಾನ ವ್ಯಕ್ತಪಡಿಸಿದ್ದರು. ಪಕ್ಷಾತೀತವಾಗಿ ಎಲ್ಲ ನಾಯಕರು ಎಲ್ಲರನ್ನೂ ಭೇಟಿಯಾಗುತ್ತಾರೆ. ಆದರೆ, ಕಟ್ಟಾ ಕಾಂಗ್ರೆಸ್ಸಿಗ ಎಂಬಿ ಪಾಟೀಲ್‌ ಬಗ್ಗೆ ಡಿಕೆ ಶಿವಕುಮಾರ್‌ ಅವರು ನೀಡಿರುವ ಹೇಳಿಕೆ ಅಚ್ಚರಿ ತಂದಿದೆ. ಕಾಂಗ್ರೆಸ್‌ ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕಲ್ಲವೇ ಎಂದು ಪ್ರಶ್ನಿಸಿದ್ದರು.

ಡಿಕೆಶಿ v/s ಎಂ.ಬಿ ಪಾಟೀಲ್‌: ರಾಜ್ಯ ಕಾಂಗ್ರೆಸ್ ಆಂತರಿಕ ತಿಕ್ಕಾಟವನ್ನು ಬಹಿರಂಗಗೊಳಿಸಿದ ರಮ್ಯಾ ಟ್ವೀಟ್‌!
ರಮ್ಯಾ ಟ್ವೀಟ್‌ಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ, ನನ್ನ ಟ್ವೀಟ್‌ಗೆ ಕೌಂಟರ್‌ ನೀಡಿ ಟ್ರೋಲ್‌ ಮಾಡಿ ಎಂದು ಕಾಂಗ್ರೆಸ್‌ ಕಚೇರಿಯಿಂದ ಕಾಂಗ್ರೆಸ್‌ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಸಂದೇಶಗಳನ್ನು ಕಳುಹಿಸಲಾಗುತ್ತಿದೆ ಎಂದು ಸಂದೇಶಗಳ ಸ್ಕ್ರೀನ್‌ ಶಾಟ್‌ಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಅದಲ್ಲದೇ ಡಿಕೆ ಶಿವಕುಮಾರ್‌ ಅವರಿಗೂ ಕೂಡ ಈ ಟ್ವೀಟ್‌ ಅನ್ನು ಟ್ಯಾಗ್‌ ಮಾಡಿ ಗಮನ ಸೆಳೆದಿದ್ದರು.

ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಒಂದು ಟ್ವೀಟ್‌ಗೆ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ!Source link

Leave a Reply

Your email address will not be published.