ಬಾಹ್ಯಾಕಾಶದಿಂದ ಬಿದ್ದವು ನಿಗೂಢ ‘ಲೋಹದ ಚೆಂಡುಗಳು’: ಭಯಭೀತರಾದ ಜನರು

Ford exits India again! Steps back from plans to make electric vehicles here
Ford exits India again! Steps back from plans to make electric vehicles here
May 13, 2022
To boost early-stage growth, adopt a jobs-to-be-done approach to marketing – TechCrunch
To boost early-stage growth, adopt a jobs-to-be-done approach to marketing – TechCrunch
May 13, 2022
ಬಾಹ್ಯಾಕಾಶದಿಂದ ಬಿದ್ದವು ನಿಗೂಢ ‘ಲೋಹದ ಚೆಂಡುಗಳು’: ಭಯಭೀತರಾದ ಜನರು


ಅಹಮದಾಬಾದ್: ಗುಜರಾತ್‌ನ ಆನಂದ್ ಜಿಲ್ಲೆಯ ಮೂರು ಗ್ರಾಮಗಳಲ್ಲಿನ ಸ್ಥಳೀಯರು ತೀವ್ರ ಆತಂಕದಲ್ಲಿದ್ದಾರೆ. ಭಾರಿ ದೊಡ್ಡ ವಸ್ತುಗಳು ಆಕಾಶದಿಂದ ಬಿದ್ದ ಸದ್ದಿನಿಂದ ನೆಲ ಅದುರಿದೆ. ಭೂಕಂಪವೇ ಸಂಭವಿಸಿತೇನೋ ಎಂದು ಭಯಭೀತರಾಗಿ ಮನೆಗಳಿಂದ ಜನರು ಹೊರಗೋಡಿ ಬಂದಿದ್ದಾರೆ. ಹೊರಗೆ ಬಂದವರಿಗೆ ಕಾಣಿಸಿದ್ದು, ಉಲ್ಕಾಶಿಲೆಯಂತಹ ವಸ್ತುಗಳು. ಚೆಂಡಿನ ಗಾತ್ರದ ಈ ವಸ್ತುಗಳನ್ನು ಕಂಡು ಗ್ರಾಮಸ್ಥರು ಕಂಗಾಲಾಗಿದ್ದಾರೆ.

ಗುರುವಾರ ಸಂಜೆ 4.45ರ ಸುಮಾರಿಗೆ ಈ ಘಟನೆ ನಡೆದಿದೆ. ಸುಮಾರು ಐದು ಕೆಜಿ ತೂಕದ ಕಪ್ಪು ಬಣ್ಣದ ಲೋಹದ ಗುಂಡು ಭಲೇಜ್ ಗ್ರಾಮದಲ್ಲಿ ಮೊದಲು ಬಿದ್ದಿದೆ. ಬಳಿಕ ಖಾಂಬೋಲಜ್ ಮತ್ತು ರಾಮಪುರಗಳಲ್ಲಿ ಕೂಡ ಇವು ಆಕಾಶದಿಂದ ಧರೆಗುರುಳಿವೆ. ಇವೆಲ್ಲವೂ ಪರಸ್ಪರ 15 ಕಿಮೀ ಅಂತರದಲ್ಲಿರುವ ಗ್ರಾಮಗಳಾಗಿವೆ.

ಅನ್ಯಗ್ರಹ ಜೀವಿಗಳನ್ನು ಸೆಳೆಯಲು ಬಾಹ್ಯಾಕಾಶಕ್ಕೆ ಮನುಷ್ಯರ ನಗ್ನ ಚಿತ್ರ ರವಾನೆ!: ನಾಸಾ ಯೋಜನೆ

ಈ ಲೋಹದ ಚೆಂಡುಗಳು ಉಪಗ್ರಹದ ಅವಶೇಷಗಳು ಇರಬಹುದು ಎಂದು ಊಹಿಸಲಾಗಿದೆ. ಜಿಲ್ಲಾ ಪೊಲೀಸರ ಗಮನಕ್ಕೆ ಈ ಘಟನೆ ಬಂದಿದ್ದು, ತನಿಖೆ ನಡೆಸುವಂತೆ ಅವರು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್ಎಲ್) ಪರಿಣತರಿಗೆ ಕರೆ ಮಾಡಿದ್ದಾರೆ.

“ಮೊದಲ ಚೆಂಡು 4.45ರ ವೇಳೆಗೆ ಬಿದ್ದಿದೆ. ನಂತರ ಕೆಲವೇ ಅವಧಿಯಲ್ಲಿ ಅದೇ ರೀತಿಯ ಚೆಂಡುಗಳು ಇನ್ನೂ ಎರಡು ಕಡೆ ಬಿದ್ದಿವೆ. ಅದೃಷ್ಟವಶಾತ್ ಯಾವುದೇ ಗಾಯ ಅಥವಾ ಜೀವಹಾನಿ ಉಂಟಾಗಿಲ್ಲ. ಖಾಂಬೋಲಜ್‌ನಲ್ಲಿ ಒಂದು ಮನೆಯಿಂದ ಕೊಂಚ ದೂರದಲ್ಲಿ ಇದು ಬಿದ್ದಿದ್ದರೆ, ಇನ್ನು ಎರಡು ಕಡೆ ತೆರೆದ ಪ್ರದೇಶಗಳಲ್ಲಿ ಪತನಗೊಂಡಿವೆ. ಇದು ಯಾವ ಬಗೆಯ ಬಾಹ್ಯಾಕಾಶ ಅವಶೇಷ ಎನ್ನುವುದು ನಮಗೆ ಖಚಿತವಾಗಿಲ್ಲ. ಆದರೆ ಇವು ಆಕಾಶದಿಂದ ಬಿದ್ದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ” ಎಂದು ಆನಂದ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅಜಿತ್ ರಾಜಿಯಾನ್ ಹೇಳಿದ್ದಾರೆ.
Hubble @32: ‘ಗುರುತ್ವ ನೃತ್ಯ’ದಲ್ಲಿ ನಿರತವಾಗಿರುವ ಪಂಚ ಗ್ಯಾಲಕ್ಸಿಗಳ ವಿಹಂಗಮ ನೋಟ!

“ನಾವು ಹೋಗುವಾಗ ಮೂರೂ ಸ್ಥಳಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಉಪಗ್ರಹವೊಂದರ ಚಲನೆಯನ್ನು ನಿಭಾಯಿಸಲು ಬಳಸುವ ಬಾಲ್ ಬೇರಿಂಗ್‌ಗಳಂತೆ ಅವು ಕಾಣಿಸುತ್ತಿವೆ. ಗುರುತ್ವದ ಕೊರತೆಯಿಂದ ಅವು ಬಾಹ್ಯಾಕಾಶದಿಂದ ಕೆಳಕ್ಕೆ ಬಿದ್ದಿರಬಹುದು. ಈ ವಸ್ತುಗಳನ್ನು ಗುರುತಿಸಲು ಸಹಾಯ ಮಾಡುವಂತೆ ಅಹಮದಾಬಾದ್ ಮತ್ತು ಗಾಂಧಿನಗರದಿಂದ ನಾವು ವಿಧಿ ವಿಜ್ಞಾನ ಪರಿಣತರನ್ನು ಕರೆಯಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

ಏಪ್ರಿಲ್ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಇದೇ ರೀತಿಯ ಘಟನೆಯೊಂದು ವರದಿಯಾಗಿತ್ತು. ಆಕಾಶದಲ್ಲಿ ‘ಉಲ್ಕಾಶಿಲೆ’ಯೊಂದು ಕಾಣಿಸಿದಂತೆ ಆಗಿತ್ತು. ವಿಮಾನದ ರೀತಿ ಸದ್ದಿನ ಬಳಿಕ ಭಾರಿ ಸ್ಫೋಟ ಸಂಭವಿಸಿತ್ತು. ಅಧ್ಯಯನ ನಡೆಸಿದ ಬಳಿಕ ಅದು ನ್ಯೂಜಿಲ್ಯಾಂಡ್ ಉಡಾವಣೆ ಮಾಡಿದ್ದ ಉಪಗ್ರಹವೊಂದರ ಭಾಗ ಎನ್ನುವುದು ಖಚಿತವಾಗಿತ್ತು.Source link

Leave a Reply

Your email address will not be published.