ಪಂಜಾಬ್ ಆಸ್ಪತ್ರೆಯಲ್ಲಿ ಭಾರಿ ಬೆಂಕಿ ಅನಾಹುತ: ಅದೃಷ್ಟವಶಾತ್ ರೋಗಿಗಳು ಬಚಾವ್

DeepMind’s ‘Gato’ is mediocre, so why did they build it? | ZDNet
DeepMind’s ‘Gato’ is mediocre, so why did they build it? | ZDNet
May 14, 2022
Manik Saha to be new Chief Minister of Tripura, replaces Biplab Deb
Manik Saha to be new Chief Minister of Tripura, replaces Biplab Deb
May 14, 2022


ಅಮೃತಸರ: ಪಂಜಾಬ್‌ನ ಅಮೃತಸರದಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜೊಂದರಲ್ಲಿ ಶನಿವಾರ ಸಂಜೆ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಸರಿಯಾದ ಸಮಯಕ್ಕೆ ಎಲ್ಲ ರೋಗಿಗಳನ್ನೂ ಕಟ್ಟಡದಿಂದ ಹೊರಕ್ಕೆ ಸಾಗಿಸಲಾಗಿದೆ. ಹೀಗಾಗಿ ಯಾವುದೇ ಸಾವು ನೋವಿನ ಹಾನಿ ಉಂಟಾಗಿಲ್ಲ. ಆಸ್ಪತ್ರೆಯ ಕಟ್ಟಡವನ್ನು ಕಡು ಕಪ್ಪನೆಯ ಹೊಗೆ ಸಂಪೂರ್ಣವಾಗಿ ಆವರಿಸಿರುವುದು ವಿಡಿಯೋಗಳಲ್ಲಿ ಸೆರೆಯಾಗಿದೆ.

ಕಟ್ಟಡದ ಹಿಂಭಾಗದ ಎಕ್ಸ್‌ ರೇ ವಿಭಾಗದ ಸಮೀಪದಲ್ಲಿ ಪಾರ್ಕಿಂಗ್ ಪ್ರದೇಶದಲ್ಲಿನ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನಲ್ಲಿ ಬೆಂಕಿ ಹೊತ್ತಿಕೊಂಡು ಆಸ್ಪತ್ರೆಗೆ ಆವರಿಸಿತ್ತು ಎಂದು ಗುರು ನಾನಕ್ ದೇವ್ ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ಕಟ್ಟಡದ ಬೇರೆ ಬೇರೆ ವಾರ್ಡ್‌ಗಳಲ್ಲಿ ದಾಖಲು ಮಾಡಿದ್ದ ರೋಗಿಗಳನ್ನು ಆಸ್ಪತ್ರೆ ಉದ್ಯೋಗಿಗಳು ಮತ್ತು ಅವರ ಸಹಾಯಕರು ಸಕಾಲಕ್ಕೆ ಸ್ಥಳಾಂತರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ದಿಲ್ಲಿಯಲ್ಲಿ ಅಗ್ನಿ ದುರಂತ : ಮುಗಿಲುಮುಟ್ಟಿದ ಕುಟುಂಬದ ಆಕ್ರಂದನ, ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

“ಆರಂಭದಲ್ಲಿ ಟ್ರಾನ್ಸ್‌ಫಾರ್ಮರ್‌ಗಳಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಎಂಟು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತಲುಪಿದ್ದವು. ಈಗ ಬೆಂಕಿ ನಿಯಂತ್ರಣದಲ್ಲಿದೆ. ಯಾವುದೇ ಗಾಯಗಳು ಉಂಟಾದ ವರದಿಯಾಗಿಲ್ಲ” ಎಂದು ಅಗ್ನಿಶಾಮಕ ಅಧಿಕಾರಿ ಲವ್‌ಪ್ರೀತ್ ಸಿಂಗ್ ಹೇಳಿದ್ದಾರೆ.

ತಾವು ಪರಿಹಾರ ಕಾರ್ಯದ ಮೇಲೆ ನಿಗಾವಹಿಸಿರುವುದಾಗಿ ಪಂಜಾಬ್ ಸಿಎಂ ಭಗವಂತ್ ಮನ್ ತಿಳಿಸಿದ್ದಾರೆ. ರಾಜ್ಯ ವಿದ್ಯುತ್ ಖಾತೆ ಸಚಿವ ಹರ್ಭಜನ್ ಸಿಂಗ್ ಸ್ಥಳದಲ್ಲಿದ್ದು, ಕಾರ್ಯಾಚರಣೆಯನ್ನು ವೀಕ್ಷಿಸಿದ್ದಾರೆ. ಬೆಂಕಿಯನ್ನು ನಂದಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ದಿಲ್ಲಿಯ ಮುಂಡ್ಕಾ ಮೆಟ್ರೋ ರೈಲು ನಿಲ್ದಾಣದ ಸಮೀಪದಲ್ಲಿನ ಕಟ್ಟಡದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ಅಗ್ನಿ ಅನಾಹುತದಲ್ಲಿ 27 ಮಂದಿ ಮೃತಪಟ್ಟ ಘಟನೆಯ ಬೆನ್ನಲ್ಲೇ ಪಂಜಾಬ್‌ನಲ್ಲಿ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಎಲ್ಲರೂ ಬಚಾವಾಗಿದ್ದಾರೆ.Source link

Leave a Reply

Your email address will not be published.