ನನ್ನ ಸುರಕ್ಷತೆ ಬಗ್ಗೆ ಕುಟುಂಬದಲ್ಲಿ ಆತಂಕ ಮೂಡಿದೆ: ವಾರಾಣಸಿ ಮಸೀದಿ ಪ್ರಕರಣದ ನ್ಯಾಯಾಧೀಶ

रमेश लटके; जिवाला जीव देणारा कार्यकर्ता आम्ही गमावला : मुख्यमंत्री – पुढारी
रमेश लटके; जिवाला जीव देणारा कार्यकर्ता आम्ही गमावला : मुख्यमंत्री – पुढारी
May 13, 2022
Lorry-cleaner to Rs 350 crore businessman: Murder accused Shaibin’s shocking rags-to-riches story
Lorry-cleaner to Rs 350 crore businessman: Murder accused Shaibin’s shocking rags-to-riches story
May 13, 2022


ವಾರಾಣಸಿ: ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವ್ಯಾಪಿ ಮಸೀದಿ ಒಳಗೆ ತಪಾಸಣೆಗೆ ಆದೇಶ ನೀಡಿರುವ ವಾರಾಣಸಿ ನ್ಯಾಯಾಲಯದ ನ್ಯಾಯಾಧೀಶ ತಮ್ಮ ಸುರಕ್ಷತೆ ಬಗ್ಗೆ ಕುಟುಂಬಕ್ಕೆ ಆತಂಕ ಉಂಟಾಗಿರುವುದಾಗಿ ತಿಳಿಸಿದ್ದಾರೆ. ‘ತೀರಾ ಸಾಮಾನ್ಯ ಸಿವಿಲ್ ಪ್ರಕರಣವನ್ನು ಅಸಾಧಾರಣ ವಿಚಾರವನ್ನಾಗಿ ಪರಿವರ್ತಿಸಲಾಗಿದೆ’. ಇದರಿಂದ ತಮ್ಮ ಕುಟುಂಬ ತೀವ್ರ ಚಿಂತೆಗೊಳಗಾಗಿದೆ ಎಂದು ಹೇಳಿದ್ದಾರೆ.

ವಾರಾಣಸಿ ಅಧೀನ ನ್ಯಾಯಾಲಯದ ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರಾಗಿರುವ ರವಿ ಕುಮಾರ್ ದಿವಾಕರ್, “ಭೀತಿಯ ವಾತಾವರಣವನ್ನು ಸೃಷ್ಟಿಸಲಾಗಿದೆ. ಈ ಆತಂಕ ಹೇಗಿದೆ ಎಂದರೆ, ನನ್ನ ಕುಟುಂಬವು ತಮ್ಮ ಹಾಗೂ ನನ್ನ ಸುರಕ್ಷತೆ ಬಗ್ಗೆ ಚಿಂತೆಗೀಡಾಗಿದೆ. ನಾನು ಮನೆಯಿಂದ ಹೊರಗೆ ಕಾಲಿಟ್ಟಾಗಲೆಲ್ಲ ನನ್ನ ಭದ್ರತೆ ಬಗ್ಗೆ ಪತ್ನಿ ಕಳವಳ ವ್ಯಕ್ತಪಡಿಸುತ್ತಾಳೆ. ನಾನು ಸಮೀಕ್ಷೆ ನಡೆಯುವ ಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂದು ಕೆಲವು ಮಾಧ್ಯಮ ವರದಿಗಳು ಹೇಳಿವೆ. ಆದರೆ, ಹಾಗೆ ಮಾಡಬೇಡ ಎಂದು ನನ್ನ ತಾಯಿ ಹೇಳಿದ್ದಾರೆ. ಏಕೆಂದರೆ ಅವರಿಗೆ ನನ್ನ ಸುರಕ್ಷತೆ ಬಗ್ಗೆ ಆತಂಕವಿದೆ” ಎಂದು ತಮ್ಮ ತೀರ್ಪು ಪ್ರಕಟಿಸುವಾಗ ತಿಳಿಸಿದ್ದಾರೆ.
ಮತ್ತೊಂದು ಮಸೀದಿಯನ್ನು ಕಳೆದುಕೊಳ್ಳಲು ಬಯಸುವುದಿಲ್ಲ: ಅಸಾದುದ್ದೀನ್ ಓವೈಸಿ ಆಕ್ರೋಶ

ಅರ್ಜಿದಾರರು ಮನವಿ ಮಾಡಿರುವಂತೆ ಜ್ಞಾನವ್ಯಾಪಿ ಮಸೀದಿಯ ಒಳಗಿನ ಎಲ್ಲಾ ಭಾಗಗಳಲ್ಲಿಯೂ ವಿಡಿಯೋಗ್ರಫಿ ನಡೆಸಬಹುದು ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದರು. ಜ್ಞಾನವ್ಯಾಪಿ ಮಸೀದಿ ಸಂಕೀರ್ಣದಲ್ಲಿನ ಪಶ್ಚಿಮ ಗೋಡೆಯ ಹಿಂದೆ ಇರುವ ಹಿಂದೂ ದೇಗುಲಕ್ಕೆ ವರ್ಷ ಪೂರ್ತಿ ದರ್ಶನ ಮತ್ತು ಪೂಜೆಯ ಅವಕಾಶ ಕಲ್ಪಿಸಬೇಕು ಎಂದು ಕೋರಿ ಐವರು ಹಿಂದೂ ಮಹಿಳೆಯರು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ಕೋರ್ಟ್, ಅಲ್ಲಿ ತಪಾಸಣೆ ನಡೆಸುವಂತೆ ಏಪ್ರಿಲ್‌ನಲ್ಲಿ ಆದೇಶ ನೀಡಿತ್ತು.
ಮಂಗಳವಾರದ ಒಳಗೆ ಜ್ಞಾನವ್ಯಾಪಿ ಮಸೀದಿಯಲ್ಲಿ ತಪಾಸಣೆ ನಡೆಸಿ: ಕೋರ್ಟ್ ಆದೇಶ

ಈ ಸ್ಥಳವು ಪ್ರಸ್ತುತ ವರ್ಷಕ್ಕೆ ಒಮ್ಮೆ ಮಾತ್ರ ಪ್ರಾರ್ಥನೆಗೆ ತೆರೆಯುತ್ತದೆ. ಅಲ್ಲಿ ಪ್ರತಿನಿತ್ಯವೂ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಮತ್ತು ಹಳೆಯ ದೇವಸ್ಥಾನ ಸಂಕೀರ್ಣದೊಳಗೆ ಇರುವ ಕಾಣಿಸುವ ಹಾಗೂ ಕಾಣಿಸದ ದೇವತೆಗಳಿಗೆ ಕೂಡ ಪೂಜೆಗೆ ಅನುಮತಿ ಕೊಡಬೇಕು ಎಂದು ಮಹಿಳೆಯರು ಮನವಿ ಮಾಡಿದ್ದರು. ಮೇ 10ರಂದು ವರದಿ ಸಲ್ಲಿಸುವಂತೆ ನ್ಯಾಯಾಲಯವು ಅಧಿಕಾರಿಗಳಿಗೆ ಮೊದಲು ಸೂಚನೆ ನೀಡಿತ್ತು. ಆದರೆ ಮಸೀದಿ ಒಳಗೆ ವಿಡಿಯೋ ಚಿತ್ರೀಕರಣ ಮಾಡುವ ಸಂಬಂಧ ವಿವಾದದ ಕಾರಣ ಅದು ಪೂರ್ಣಗೊಂಡಿರಲಿಲ್ಲ. ಗುರುವಾರ ಮತ್ತೆ ವಿಚಾರಣೆ ನಡೆಸಿದ್ದ ಕೋರ್ಟ್, ಮೇ 17ರ ಒಳಗೆ ವಿಡಿಯೋ ಚಿತ್ರೀಕರಣ ಪೂರ್ಣಗೊಳ್ಳಬೇಕು ಎಂದು ಸೂಚನೆ ನೀಡಿತ್ತು. ಜತೆಗೆ ಅದಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿತ್ತು.Source link

Leave a Reply

Your email address will not be published.