ದಂತವೈದ್ಯನಿಗೆ ಮುಖ್ಯಮಂತ್ರಿ ಪಟ್ಟ!: ತ್ರಿಪುರಾ ಸಿಎಂ ಆಗಿ ಮಾಣಿಕ್ ಸಹಾರನ್ನು ನೇಮಿಸಿದ ಬಿಜೆಪಿ

The Innocents review: A wan killer-kid thriller | Digital Trends
The Innocents review: A wan killer-kid thriller | Digital Trends
May 14, 2022
અકસ્માત: ​​​​​​​દાહોદના નસીરપુર પાસે ટ્રેક્ટર ચાલકે બાઇકને ટક્કર મારી, એકનું મોત
અકસ્માત: ​​​​​​​દાહોદના નસીરપુર પાસે ટ્રેક્ટર ચાલકે બાઇકને ટક્કર મારી, એકનું મોત
May 14, 2022


ಹೊಸದಿಲ್ಲಿ: ತ್ರಿಪುರಾ ಮುಖ್ಯಮಂತ್ರಿ ಸ್ಥಾನಕ್ಕೆ ಬಿಪ್ಲವ್ ಕುಮಾರ್ ದೇವ್ ಅವರು ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಡಾ. ಮಾಣಿಕ್ ಸಹಾ ಅವರನ್ನು ಬಿಜೆಪಿ ನೂತನ ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಕೇವಲ ಒಂದು ವರ್ಷಕ್ಕೂ ಮುನ್ನ ಈ ಬದಲಾವಣೆ ನಡೆದಿದೆ. ಮಾಣಿಕ್ ಸಹಾ (Manik Saha) ಅವರು ವೃತ್ತಿಯಿಂದ ದಂತವೈದ್ಯರಾಗಿದ್ದಾರೆ. ಅವರನ್ನು ಕಳೆದ ತಿಂಗಳಷ್ಟೇ ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿತ್ತು. ಅವರು ತ್ರಿಪುರಾ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೂಡ ಹೌದು.

ಗುರುವಾರ ದಿಲ್ಲಿಗೆ ತೆರಳಿ ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದ ಬಿಪ್ಲವ್ ಕುಮಾರ್ ದೇವ್ (Biplab Kumar Deb) ಅವರು ಶನಿವಾರ ರಾಜ್ಯಪಾಲ ಎಸ್‌ಎನ್ ಆರ್ಯ ಅವರಿಗೆ ರಾಜೀನಾಮೆ ಪತ್ರ ನೀಡಿದ್ದರು. ಬಳಿಕ ಸಂಜೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಹಾ ಅವರನ್ನು ಮುಂದಿನ ಸಿಎಂ ಆಗಿ ಆಯ್ಕೆ ಮಾಡಲಾಯಿತು.
Breaking: ತ್ರಿಪುರಾ ಮುಖ್ಯಮಂತ್ರಿ ಬಿಪ್ಲವ್ ಕುಮಾರ್ ದೇವ್ ರಾಜೀನಾಮೆ

ದೇವ್ ಅವರ ರಾಜೀನಾಮೆಯ ಸಮಯ, ಸಹಾ ಅವರಿಗೆ ಸವಾಲುಗಳ ರಾಶಿಯನ್ನೇ ಒಡ್ಡಿದೆ. 2023ರ ಆರಂಭದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುವ ಅತ್ಯಂತ ಕಠಿಣ ಹೊಣೆ ಅವರ ಮೇಲಿದೆ. ಜತೆಗೆ ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟಗಳನ್ನು ಸರಿಪಡಿಸುವ ಕೆಲಸವನ್ನು ಕೂಡ ಮಾಡಬೇಕಿದೆ.

ಸಹಾ ಅವರು ತ್ರಿಪುರಾದ 11ನೇ ಸಿಎಂ ಆಗಲಿದ್ದಾರೆ. ಅವರು ಈ ಮುಂಚೆ ಕಾಂಗ್ರೆಸ್ ಸದಸ್ಯರಾಗಿದ್ದರು. 2016ರಲ್ಲಿ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. 2020ರಲ್ಲಿ ತ್ರಿಪುರಾ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕವಾಗಿದ್ದರು. ತ್ರಿಪುರಾದ ಏಕೈಕ ರಾಜ್ಯಸಭಾ ಸೀಟಿನಿಂದ ಅವರು ಈ ವರ್ಷ ಆಯ್ಕೆಯಾಗಿದ್ದರು.

2018ರಲ್ಲಿ ಬಿಪ್ಲವ್ ಕುಮಾರ್ ದೇವ್ ಅವರ ನೇತೃತ್ವದಲ್ಲಿ ಬಿಜೆಪಿ ಬಹುಮತದೊಂದಿಗೆ ತ್ರಿಪುರಾದಲ್ಲಿ ಅಧಿಕಾರಕ್ಕೆ ಬಂದಿತ್ತು. ಅದರೊಂದಿಗೆ 25 ವರ್ಷಗಳ ಕಮ್ಯುನಿಸ್ಟ್ ಪಕ್ಷದ ಆಡಳಿತವನ್ನು ಅಂತ್ಯಗೊಳಿಸಿತ್ತು.
ಬಿಜೆಪಿ ಸರ್ಕಾರದ ‘ತಪ್ಪುಗಳಿಗೆ ಪ್ರಾಯಶ್ಚಿತ್ತ’: ತಲೆಬೋಳಿಸಿಕೊಂಡು ಪಕ್ಷ ತೊರೆದ ತ್ರಿಪುರ ಶಾಸಕ

ಮಾಣಿಕ್ ಸಹಾ ಅವರು ತ್ರಿಪುರಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೂ ಆಗಿದ್ದಾರೆ. ಮುಖ್ಯವಾಹಿನಿಯ ರಾಜಕಾರಣಕ್ಕೆ ಬರುವ ಮುನ್ನ ಸಹಾ ಅವರು ಹಪಾನಿಯಾದ ತ್ರಿಪುರಾ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು.

ತಮ್ಮ ಉತ್ತರಾಧಿಕಾರಿಯಾಗಿ ನೇಮಕವಾದ ಸಹಾ ಅವರನ್ನು ಬಿಪ್ಲವ್ ದೇವ್ ಅಭಿನಂದಿಸಿದ್ದಾರೆ. “ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವುದಕ್ಕೆ ಮಾಣಿಕ್ ಸಹಾ ಅವರಿಗೆ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿತ್ವ ಮತ್ತು ನಾಯಕತ್ವದಲ್ಲಿ ತ್ರಿಪುರಾ ಸಮೃದ್ಧಗೊಳ್ಳಲಿದೆ ಎಂದು ನಂಬುತ್ತೇನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

“ಪಕ್ಷ ಎಲ್ಲರಿಗಿಂತಲೂ ದೊಡ್ಡದು. ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ನನಗೆ ನೀಡಿದ್ದ ಜವಾಬ್ದಾರಿಗಳಿಗೆ ನ್ಯಾಯ ಸಲ್ಲಿಸಿದ್ದೇನೆ ಎಂಬ ಭರವಸೆ ಇದೆ. ಅದು ಬಿಜೆಪಿ ರಾಜ್ಯ ಅಧ್ಯಕ್ಷನಾಗಿರಬಹುದು ಅಥವಾ ತ್ರಿಪುರಾ ಸಿಎಂ ಆಗಿರಬಹುದು. ನಾನು ತ್ರಿಪುರಾದ ಒಟ್ಟಾರೆ ಪ್ರಗತಿಗಾಗಿ ಕೆಲಸ ಮಾಡಿದ್ದೇನೆ ಮತ್ತು ರಾಜ್ಯದ ಜನರ ಶಾಂತಿ ಕಾಪಾಡಲು ಶ್ರಮಿಸಿದ್ದೇನೆ” ಎಂದು ದೇವ್ ಹೇಳಿದ್ದಾರೆ.Source link

Leave a Reply

Your email address will not be published.