ತಾಜ್‌ಮಹಲ್‌ನ 22 ಕೊಠಡಿಗಳ ಬೀಗ ತೆರೆಯುವಂತೆ ಮನವಿ: ಅರ್ಜಿ ತಿರಸ್ಕರಿಸಿದ ಕೋರ್ಟ್

Sources: Man Utd face uphill battle for De Jong
Sources: Man Utd face uphill battle for De Jong
May 12, 2022
રમકડાનું દાન: ગાંધીનગરની ચિલ્ડ્રન્સ યૂનિવર્સિટી દ્વારા ગરીબ બાળકો માટે 5500 રમકડાંનું દાન કરાયું, લિમ્કા બુક ઑફ રેકોર્ડ માટે દાવો
રમકડાનું દાન: ગાંધીનગરની ચિલ્ડ્રન્સ યૂનિવર્સિટી દ્વારા ગરીબ બાળકો માટે 5500 રમકડાંનું દાન કરાયું, લિમ્કા બુક ઑફ રેકોર્ડ માટે દાવો
May 12, 2022


ಹೊಸದಿಲ್ಲಿ: ಐತಿಹಾಸಿಕ ತಾಜ್‌ ಮಹಲ್‌ ಕುರಿತಂತೆ ತನಿಖೆ ನಡೆಸಬೇಕು ಎಂದು ಕೋರಿ ಅಲಹಾಬಾದ್ ಹೈಕೋರ್ಟ್ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ. ತಾಜ್‌ಮಹಲ್‌ನ 22 ಕೊಠಡಿಗಳಲ್ಲಿ ಏನಿದೆ ಎಂಬುದನ್ನು ನೋಡಲು ಅವುಗಳ ಬೀಗ ತೆಗೆಸಬೇಕು ಎಂದು ಕೋರಿದ್ದ ಅರ್ಜಿಯನ್ನು ಅದು ವಜಾಗೊಳಿಸಿದೆ.

“ಈ ಪ್ರಕರಣ ಕೋರ್ಟ್‌ನ ವ್ಯಾಪ್ತಿಯಲ್ಲಿ ಇಲ್ಲ. ಇದನ್ನು ವಿವಿಧ ವಿಧಾನಗಳಲ್ಲಿ ಮಾಡಬೇಕು ಹಾಗೂ ಇದು ಇತಿಹಾಸಕಾರರಿಗೆ ಬಿಟ್ಟ ಸಂಗತಿ” ಎಂದು ಕೋರ್ಟ್ ಹೇಳಿದೆ.
ತಾಜ್‌ಮಹಲ್‌ನಲ್ಲಿ ದೇವತೆಗಳ ವಿಗ್ರಹ ಶೋಧ : ಮುಚ್ಚಿರುವ 22 ಕೋಣೆಗಳ ರಹಸ್ಯ ತಿಳಿಯಲು ಅರ್ಜಿ ಸಲ್ಲಿಕೆ

ಬಿಜೆಪಿ ಯುವ ಮಾಧ್ಯಮ ಉಸ್ತುವಾರಿ ರಜನೀಶ್ ಸಿಂಗ್ ಅವರು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು. ತಾಜ್‌ಮಹಲ್‌ನಲ್ಲಿ ಮುಚ್ಚಿರುವ 22 ಬಾಗಿಲುಗಳನ್ನು ತೆರೆದು, ಅವುಗಳಲ್ಲಿ ಹಿಂದೂ ದೇವತೆಗಳ ವಿಗ್ರಹಗಳು ಇವೆಯೇ ಎಂದು ಖಚಿತಪಡಿಸಲು ತನಿಖೆ ನಡೆಸುವಂತೆ ಭಾರತೀಯ ಪುರತತ್ವ ಇಲಾಖೆಗೆ ಸೂಚನೆ ನೀಡುವಂತೆ ಮನವಿ ಮಾಡಿದ್ದರು.

ತಾಜ್‌ ಮಹಲ್ ಕುರಿತಂತೆ ಸುಳ್ಳು ಇತಿಹಾಸವನ್ನು ಬೋಧಿಸಲಾಗಿದೆ. ಹೀಗಾಗಿ ಸತ್ಯವನ್ನು ಬಯಲಿಗೆಳೆಯಲು ಬಾಗಿಲುಗಳನ್ನು ತೆರೆಯಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು. ಮುಘಲ್ ಕಾಲದ ಸ್ಮಾರಕವನ್ನು ಭಾರತೀಯ ಪುರತತ್ವ ಸರ್ವೇಕ್ಷಣೆ ನಿಭಾಯಿಸುತ್ತಿದೆ.

ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳಾದ ಡಿಕೆ ಉಪಾಧ್ಯಾಯ ಮತ್ತು ಸುಭಾಷ್ ವಿದ್ಯಾರ್ಥಿ ಅವರನ್ನು ಒಳಗೊಂಡ ನ್ಯಾಯಪೀಠ, “ನಾಳೆ ನೀವು ಬಂದು ಗೌರವಾನ್ವಿತ ನ್ಯಾಯಮೂರ್ತಿಗಳ ಕೊಠಡಿಗೆ ಹೋಗುವಂತೆ ನಮಗೆ ಹೇಳುತ್ತೀರಾ? ಪಿಐಎಲ್ ವ್ಯವಸ್ಥೆಯನ್ನು ದಯವಿಟ್ಟು ಅಣಕಿಸಬೇಡಿ” ಎಂದು ಅಸಮಾಧಾನ ವ್ಯಕ್ತಪಡಿಸಿತು.Source link

Leave a Reply

Your email address will not be published.