ಚುನಾವಣೆಗೆ ಮುನ್ನ ಮಂಗಳೂರಿನಲ್ಲಿ ಶಾಸಕರ ಕ್ರಿಕೆಟ್ ಫೈಟ್; 8 ವಿಧಾನಸಭೆ ಕ್ಷೇತ್ರದ ಆಟಗಾರರಿಂದ ಕಾದಾಟ

Solar cases: CBI quizzes Ganesh; Chandy, other Cong leaders next
Solar cases: CBI quizzes Ganesh; Chandy, other Cong leaders next
May 14, 2022
Odisha Vigilance arrests Rayagada Excise Superintendent
Odisha Vigilance arrests Rayagada Excise Superintendent
May 14, 2022


ವಿಜಯ್‌ ಕೋಟ್ಯಾನ್‌
ಮಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಬಗ್ಗೆ ಈಗಲೇ ಚರ್ಚೆ ಆರಂಭವಾಗಿದ್ದು, ಪಕ್ಷಾಂತರವೂ ಶುರುವಾಗಿದೆ. ಇದಕ್ಕೆ ಮುನ್ನವೇ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಬಿಗ್‌ ಫೈಟ್‌ಗೆ ಇಳಿದಿದ್ದಾರೆ. ಆದರೆ ಇದು ಚುನಾವಣೆಯಲ್ಲ… ಎಂಎಲ್‌ಎ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಪಂದ್ಯಾವಳಿ!

ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ಆರಂಭವಾದ ಸಂಕಲ್ಪ ಫೌಂಡೇಶನ್‌ ಈ ವಿಭಿನ್ನ ಪ್ರಯತ್ನಕ್ಕೆ ಮುದಾಗಿದ್ದು, ಮೇ 28, 29ರಂದು ಅಡ್ಯಾರ್‌ ಸಹ್ಯಾದ್ರಿ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ.
ಮಣ್ಣಾಗುವ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ: ಕರಾವಳಿಯಲ್ಲಿ ನೇರಳೆ ಹಣ್ಣಿಗೆ ಚಿನ್ನದ ರೇಟು!
ಶಾಸಕರ ತಂಡಗಳು ಯಾವುದು?
ಡಾ.ಭರತ್‌ ಶೆಟ್ಟಿ ನೇತೃತ್ವದ ಉತ್ತರ ತಂಡ, ಡಿ.ವೇದವ್ಯಾಸ ಕಾಮತ್‌ ನೇತೃತ್ವದ ದಕ್ಷಿಣ ತಂಡ, ಯು.ಟಿ. ಖಾದರ್‌ ನೇತೃತ್ವದ ಮಂಗಳೂರು ತಂಡ, ಹರೀಶ್‌ ಪೂಂಜ ನೇತೃತ್ವದ ಬೆಳ್ತಂಗಡಿ ತಂಡ, ಅಂಗಾರ ನೇತೃತ್ವದ ಸುಳ್ಯ ತಂಡ, ಉಮಾನಾಥ್‌ ಕೋಟ್ಯಾನ್‌ ನೇತೃತ್ವದ ಮೂಡುಬಿದಿರೆ ತಂಡ, ಸಂಜೀವ ಮಠಂದೂರು ನೇತೃತ್ವದ ಪುತ್ತೂರು ತಂಡಗಳ ಮಧ್ಯೆ ಹಣಾಹಣೆ ನಡೆಯಲಿದೆ. ಈ ತಂಡಗಳ ಹೆಸರು ಶೀಘ್ರದಲ್ಲೇ ಪ್ರಕಟವಾಗಲಿದೆ.

8 ಓವರ್‌ಗಳ ಓವರ್‌ ಆರ್ಮ್‌ ಲೀಗ್‌ ಪಂದ್ಯಾವಳಿ ಇದ್ದಾಗಿದ್ದು, ಪಾಯಿಂಟ್‌ ಆಧಾರದಲ್ಲಿ ಕ್ವಾರ್ಟರ್‌ ಫೈನಲ್‌, ಸೆಮಿಫೈನಲ್‌, ಫೈನಲ್‌ ನಿರ್ಧಾರವಾಗಲಿದೆ. ಆಯಾ ತಂಡದಲ್ಲಿ ಆಡುವ ಆಟಗಾರ ಸಂಬಂಧಪಟ್ಟ ವಿಧಾನಸಭೆ ಕ್ಷೇತ್ರದ ಸದಸ್ಯನಾಗಿರಬೇಕು. ಯಾವುದೇ ಕಾರಣಕ್ಕೂ ಬೇರೆ ವಿಧಾನಸಭೆ ಕ್ಷೇತ್ರದ ಆಟಗಾರನನ್ನು ಆಡಿಸುವಂತಿಲ್ಲ. ಇದಕ್ಕಾಗಿ ವೋಟರ್‌ ಐಡಿ ಅಥವಾ ಆಧಾರ್‌ ಕಾರ್ಡ್‌ ದಾಖಲೆ ಹಾಜರುಪಡಿಸಬೇಕು. ತಂಡಗಳಿಗೆ ಯಾವುದೇ ನೋಂದಣಿ ಶುಲ್ಕವಿಲ್ಲ.

ಬಹುಮಾನಗಳ ವಿವರ
ಫೈನಲ್‌ನಲ್ಲಿ ವಿಜೇತ ತಂಡಕ್ಕೆ 1 ಲಕ್ಷ ರೂ. ಬಹುಮಾನ ಮತ್ತು ಪ್ರಶಸ್ತಿ, ರನ್ನರ್ಸ್ ಅಪ್‌ ತಂಡಕ್ಕೆ 50 ಸಾವಿರ ರೂ. ಮತ್ತು ಪ್ರಶಸ್ತಿ ಸಿಗಲಿದೆ. ಸರಣಿ ಶ್ರೇಷ್ಠ, ಬೆಸ್ಟ್‌ ಬ್ಯಾಟ್ಸ್‌ಮನ್‌, ಬೆಸ್ಟ್‌ ಬೌಲರ್‌ ಪ್ರಶಸ್ತಿಗಳು ಹಾಗೂ ಪ್ರತಿ ಪಂದ್ಯದಲ್ಲೂ ವಿಶೇಷ ಬಹುಮಾನ ನೀಡಲು ಸಂಘಟಕರು ತೀರ್ಮಾನಿಸಿದ್ದಾರೆ.
ಅಡ್ಯಾರ್‌ ಡ್ಯಾಂ ಕಾಮಗಾರಿಗೆ ಅಂತಿಮ ಸ್ಪರ್ಶ; ಮಳೆಗಾಲ ಬಳಿಕ ನೀರು ಶೇಖರಣೆ: ವಾಹನ ಸಂಚಾರಕ್ಕೂ ವ್ಯವಸ್ಥೆ
ಶಾಸಕರಿಗೆ ಟೀಮ್‌ ಆಯ್ಕೆ ಟೆನ್ಶನ್‌
ಸಾಮಾಜಿಕ ಜಾಲತಾಣದಲ್ಲಿ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಬಗ್ಗೆ ಸಂಚಲನ ಸೃಷ್ಟಿಯಾಧಿಗಿದೆ. ಜಿಲ್ಲೆಯಲ್ಲಿ 7 ಬಿಜೆಪಿ ಶಾಸಕರು ಮತ್ತು ಒಬ್ಬರು ಕಾಂಗ್ರೆಸ್‌ ಶಾಸಕರ ತಂಡ ಮುಖಾಮುಖಿಯಾಗಲಿದ್ದು, ಇದು ಒಂದು ರೀತಿ ಜಿದ್ದಾಜಿದ್ದಿ, ಪ್ರತಿಷ್ಠೆಯ ಪಂದ್ಯಾವಳಿಯಾಗುವ ಲಕ್ಷಣ ಕಾಣುತ್ತಿದೆ. ಇದಕ್ಕಾಗಿ ತಂಡದ ಆಯ್ಕೆ ಶಾಸಕರಿಗೆ ಸವಾಲಾಗಿದೆ. ಜಿಲ್ಲೆಯ ಏಕೈಕ ಕಾಂಗ್ರೆಸ್‌ ಶಾಸಕರು ಈ ಲೀಗ್‌ ಮ್ಯಾಚ್‌ನ್ನು ಉತ್ಸುಕತೆಯಿಂದ ಸ್ವಾಗತಿಸಿರುವುದು ಉಳಿದವರ ಟೆನ್ಶನ್‌ ಹೆಚ್ಚಿಸಿದೆ.

ಸೆಲೆಬ್ರಿಟಿಗಳು, ಗಣ್ಯರ ಆಕರ್ಷಣೆ
ಎಂಎಲ್‌ಎ ಪ್ರೀಮಿಯರ್‌ ಲೀಗ್‌ಗೆ ಸ್ಯಾಂಡಲ್‌ವುಡ್‌, ಕೋಸ್ಟಲ್‌ವುಡ್‌, ಕ್ರೀಡಾಪಟುಗಳು ಸೇರಿದಂತೆ ನಾನಾ ಕ್ಷೇತ್ರಗಳ ಸೆಲೆಬ್ರಿಟಿಗಳು, ರಾಜ್ಯ ಸಚಿವರು, ಸಂಸದರು, ಶಾಸಕರು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ರಾಜಕೀಯ ಸಮರ ಏನಿದ್ದರೂ ಚುನಾವಣೆಗೆ ಸೀಮಿತ. ಗೆದ್ದ ಬಳಿಕ ಸಮಗ್ರ ಅಭಿವೃದ್ಧಿಯೇ ಪ್ರಮುಖ. ಉಳಿದವು ಗೌಣ. ಇದನ್ನೇ ಮುಖ್ಯ ಉದ್ದೇಶವಾಗಿಟ್ಟುಕೊಂಡು ಚುನಾವಣೆ ಸಮೀಪಿಸುತ್ತಿರುವ ಕಾಲಘಟ್ಟದಲ್ಲಿ ಸೌಹಾರ್ದ ಪಂದ್ಯಾವಳಿಯಾಗಿ ಎಲ್ಲ ಶಾಸಕರ ಮಾಲೀಕತ್ವದಲ್ಲಿ ಈ ಟೂರ್ನಿ ಆಯೋಜಿಸಲಾಗಿದ್ದು, ಸಂಚಲನ ಮೂಡಿಸಿದೆ.

ಕಿರಣ್‌ ಕೋಡಿಕಲ್‌, ಮುಖ್ಯಸ್ಥರು, ಸಂಕಲ್ಪ ಫೌಂಡೇಶನ್‌Source link

Leave a Reply

Your email address will not be published.