ಗಾಂಧಿ ಕುಟುಂಬಕ್ಕೆ ವಿನಾಯಿತಿ, ಸಮಗ್ರ ಸುಧಾರಣೆ: ಕಾಂಗ್ರೆಸ್ ‘ಚಿಂತನ ಶಿಬಿರ’ ಹೇಗಿರಲಿದೆ?

5 Easy Tricks to Beat Procrastination You Should Start Today
5 Easy Tricks to Beat Procrastination You Should Start Today
May 13, 2022
6 Best Patreon Alternatives to Monetize Your Audience in 2022
6 Best Patreon Alternatives to Monetize Your Audience in 2022
May 13, 2022


ಹೊಸದಿಲ್ಲಿ: ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್ ಪಕ್ಷದ ಸ್ವರೂಪ, ನೀತಿಗಳನ್ನು ಬದಲಿಸಲು ಮುನ್ನುಡಿ ಬರೆಯಲಿದೆ ಎಂದು ನಿರೀಕ್ಷಿಸಲಾಗಿರುವ ಮೂರು ದಿನಗಳ ಮಹತ್ವದ ‘ಚಿಂತನ ಶಿಬಿರ’ ರಾಜಸ್ಥಾನದ ಉದಯಪುರದಲ್ಲಿ ಆರಂಭವಾಗಿದೆ. ‘ಒಂದು ಕುಟುಂಬ, ಒಂದು ಟಿಕೆಟ್’ ನಿಯಮದ ಸುತ್ತ ಹೆಚ್ಚಿನ ಚರ್ಚೆಗಳು ನಡೆಯಲಿವೆ. ಚುನಾವಣಾ ಸೋಲುಗಳ ಪರಾಮರ್ಶೆ ಮತ್ತು ಈ ವರ್ಷ ಹಾಗೂ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷದ ಚಟುವಟಿಕೆಗಳ ಬಗ್ಗೆ ಚಿಂತನೆ ನಡೆಯಲಿದೆ ಎನ್ನಲಾಗಿದೆ.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಪಕ್ಷದ ಸುಮಾರು 400 ನಾಯಕರು ಚಿಂತನಾ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ‘ಬಹುದೊಡ್ಡ ಬದಲಾವಣೆಗಳು’ ಇಲ್ಲಿ ಮುನ್ನೆಲೆಗೆ ಬರಲಿವೆ ಎಂದು ಪಕ್ಷ ನಾಯಕ ಅಜಯ್ ಮಾಕೆನ್ ಹೇಳಿದ್ದಾರೆ.
ಚಿಂತನ ಶಿಬಿರದಲ್ಲಿ ಮತ್ತೆ ಅಧ್ಯಕ್ಷರಾಗುವಂತೆ ರಾಹುಲ್‌ ಗಾಂಧಿಗೆ ಒತ್ತಡ ಹೇರಲಿದ್ದಾರೆ ಅಂತೆ ಕಾಂಗ್ರೆಸ್‌ ನಾಯಕರು!

‘ಒಂದು ಕುಟುಂಬ ಒಂದು ಟಿಕೆಟ್’ ನಿಯಮವನ್ನು ಮರಳಿ ಜಾರಿಗೆ ತರುವ ಬಗ್ಗೆ ಸರ್ವಾನುಮತವಿದೆ. ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರವೇ ಟಿಕೆಟ್ ಪಡೆಯಲು ಸಾಧ್ಯ. ಒಬ್ಬರಿಗಿಂತ ಹೆಚ್ಚಿನವರಿಗೆ ಚುನಾವಣಾ ಟಿಕೆಟ್ ನೀಡುವುದಕ್ಕೆ ನಿಷೇಧ ವಿಧಿಸುವುದು ಮೂಲ ಮಂತ್ರವಾಗಿದೆ. ಆದರೆ, ಈ ನಿಯಮದಿಂದ ಗಾಂಧಿ ಕುಟುಂಬ ಹೊರತಾಗಿರಲಿದೆ ಎಂಬ ಸುಳಿವನ್ನು ಪಕ್ಷದ ಮೂಲಗಳು ತಿಳಿಸಿವೆ.

“ಈ ನಿಮಯಕ್ಕೆ ಎಲ್ಲರ ಸಹಮತ ಇದೆ. ಒಬ್ಬರಿಗಿಂತ ಹೆಚ್ಚಿನವರು ಒಂದು ಕುಟುಂಬದಿಂದ ಸ್ಪರ್ಧಿಸಲೇಬೇಕು ಎಂದು ಬಯಸಿದ್ದರೆ, ಅವರು ಪಕ್ಷದ ಚಟುವಟಿಕೆಗಳಲ್ಲಿ ಐದು ವರ್ಷಗಳಿಂದ ಸಕ್ರಿಯರಾಗಿರಬೇಕು” ಎಂದು ಅಜಯ್ ಮಾಕೆನ್ ಹೇಳಿದ್ದಾರೆ. ಗಾಂಧಿ ಕುಟುಂಬಕ್ಕೆ ಇದು ಅನ್ವಯ ಆಗುವುದಿಲ್ಲವೇ ಎಂಬ ಪ್ರಶ್ನೆಗೆ ಅವರು, “ಅವರು ಕಳೆದ ಐದು ವರ್ಷಗಳಿಂದ ಸಕ್ರಿಯರಾಗಿ ಇದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ ಅವರು 2018ರಂದ ಪಕ್ಷದಲ್ಲಿ ಅಧಿಕೃತವಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್‌ನಲ್ಲಿ ‘ಒಂದು ಕುಟುಂಬ ಒಂದು ಟಿಕೆಟ್’ ನಿಯಮ: ಗಾಂಧಿ ಕುಟುಂಬಕ್ಕೆ ಮಾತ್ರ ವಿನಾಯಿತಿ?

ಈ ನಿಯಮದ ಪ್ರಕಾರ, ಎಲ್ಲ ಮೂವರೂ ಗಾಂಧಿಗಳು ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಪಡೆದಿದ್ದಾರೆ. ಕುಟುಂಬಕ್ಕೆ ಮನ್ನಣೆ ನೀಡುವ ಪಕ್ಷ ಎಂಬ ಟೀಕೆಯಿಂದ ಹೊರಗೆ ಬರುವ ಸಲುವಾಗಿ ‘ಒಂದು ಕುಟುಂಬ, ಒಂದು ಟಿಕೆಟ್’ ಮಂತ್ರ ಜಪಿಸುತ್ತಿರುವ ಕಾಂಗ್ರೆಸ್, ತನ್ನ ನಿಯಮದಲ್ಲಿಯೇ ಎದ್ದು ಕಾಣುವ ಬಹುದೊಡ್ಡ ಲೋಪವನ್ನು ಹೊಂದಿದೆ. ಪಕ್ಷದ ರಚನೆಯಲ್ಲಿನ ಆಮೂಲಾಗ್ರ ಬದಲಾವಣೆಗೆ ಬೇಡಿಕೆ ಬಂದಿರುವ ಸಂದರ್ಭದಲ್ಲಿ, ಸಣ್ಣಪುಟ್ಟ ಬದಲಾವಣೆಗಳ ಹೊರತಾಗಿ ಬೇರೇನೂ ಮಹತ್ವದ್ದು ಜರುಗುವುದಿಲ್ಲ ಎಂಬ ಸಂಕೇತ ನೀಡಿದೆ.

ನಿರ್ಣಾಯಕ ಚುನಾವಣೆಗಳಿಗೂ ಮುನ್ನ ಪಕ್ಷಕ್ಕೆ ಹೊಸ ಹುರುಪು ತರುವ ಪ್ರಯತ್ನವಾಗಿ ಕಾಂಗ್ರೆಸ್‌ನ ಪ್ರತಿ ಹಂತದಲ್ಲಿಯೂ ಅರ್ಧದಷ್ಟು ಸ್ಥಾನಗಳನ್ನು 50ಕ್ಕಿಂತ ಕಡಿಮೆ ವರ್ಷ ವಯಸ್ಸಿನ ನಾಯಕರಿಗೆ ಮೀಸಲಿಡುವ ಬಗ್ಗೆ ಕೂಡ ಚಿಂತನೆ ನಡೆದಿದೆ.
ಡಬ್ಲ್ಯೂಎಚ್‌ಒ ‘ಡೇಟಾ’ ಹಾಗೂ ಕಾಂಗ್ರೆಸ್‌ನ ‘ಬೇಟಾ’ ಎರಡೂ ಸರಿಯಿಲ್ಲ..! ಬಿಜೆಪಿ ಟಾಂಗ್..!

“ದೇಶದ ಜನಸಂಖ್ಯೆಯಲ್ಲಿ ಶೇ 60ರಷ್ಟು ಮಂದಿ 40 ವರ್ಷಕ್ಕಿಂತ ಕೆಳಗಿನವರು ಇದ್ದಾರೆ. ಹೀಗಾಗಿ ಪಕ್ಷವು ಯುವಜನರನ್ನು ಪ್ರತಿನಿಧಿಸಬೇಕು. ಇದು ಪಕ್ಷದ ಎಲ್ಲ ಘಟಕಗಳು ಹಾಗೂ ನಾವು ಹೊಂದಿರುವ ಪದವಿಗಳಲ್ಲಿ ಕೂಡ ಪ್ರತಿಫಲನವಾಗಬೇಕು” ಎಂದು ಕಾಂಗ್ರೆಸ್ ನಾಯಕ ಮಾಣಿಕ್ ಟ್ಯಾಗೋರ್ ಹೇಳಿದ್ದಾರೆ.

ಕೋಮು ಧ್ರುವೀಕರಣ, ರಾಜ್ಯ ಚುನಾವಣೆಗಳು ಮತ್ತು 2024ರ ರಾಷ್ಟ್ರೀಯ ಚುನಾವಣೆಯ ಬಗ್ಗೆ ಚರ್ಚೆ ನಡೆಸಲು ಕೂಡ ಕಾಂಗ್ರೆಸ್ ಚಿಂತನೆ ನಡೆಸಿದೆ. ಆರು ತಂಡಗಳನ್ನು ರಚಿಸಲಾಗಿದ್ದು, ಅವುಗಳು ಸಂಘಟನೆ, ದೇಶದ ಆರ್ಥಿಕತೆ ಮತ್ತು ರಾಜಕೀಯ ಪರಿಸ್ಥಿತಿ, ಸಾಮಾಜಿಕ ನ್ಯಾಯ, ರೈತರು ಹಾಗೂ ಯುವಜನರಿಗೆ ಸಂಬಂಧಿಸಿದಂತೆ ವಿಷಯಗಳನ್ನು ಕೈಗೆತ್ತಿಕೊಳ್ಳಲಿವೆ. ಪ್ರತಿ ಗುಂಪಿನಲ್ಲಿಯೂ 60- 70 ಜನರು ಇರಲಿದ್ದಾರೆ. ಕಾಗದ ಪತ್ರದ ಚರ್ಚೆಗಳು ನಡೆಯುವುದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.Source link

Leave a Reply

Your email address will not be published.