ಉತ್ತರ ಕೊರಿಯಾದಲ್ಲಿ ಕೋವಿಡ್ ಮಹಾಸ್ಫೋಟ: 3 ದಿನಗಳಲ್ಲಿ 8.20 ಲಕ್ಷ ಪ್ರಕರಣ!

ಕಳಪೆ ಬೀಜ, ರಸಗೊಬ್ಬರ ಮಾರುವವರ ವಿರುದ್ಧ ಕೇಸ್‌..! ಸಚಿವ ಪ್ರಭು ಚವ್ಹಾಣ್ ವಾರ್ನಿಂಗ್..!
ಕಳಪೆ ಬೀಜ, ರಸಗೊಬ್ಬರ ಮಾರುವವರ ವಿರುದ್ಧ ಕೇಸ್‌..! ಸಚಿವ ಪ್ರಭು ಚವ್ಹಾಣ್ ವಾರ್ನಿಂಗ್..!
May 15, 2022
8.8 million jobs added in India in April 2022: CMIE Report
8.8 million jobs added in India in April 2022: CMIE Report
May 15, 2022


ಸೋಲ್: ಇದುವರೆಗೂ ತನ್ನಲ್ಲಿ ಒಂದೇ ಒಂದು ಕೋವಿಡ್ ಪ್ರಕರಣ ಉಂಟಾಗಿಲ್ಲ ಎಂದು ಹೇಳುತ್ತಿದ್ದ ಉತ್ತರ ಕೊರಿಯಾದಲ್ಲಿ ಈಗ ಕೊರೊನಾ ವೈರಸ್ ಸ್ಫೋಟ ಸಂಭವಿಸಿದೆ. ಇತ್ತೀಚೆಗಷ್ಟೇ ತನ್ನ ಮೊದಲ ಕೋವಿಡ್ 19 ಪ್ರಕರಣ ಘೋಷಿಸಿದ್ದ ಉತ್ತರ ಕೊರಿಯಾ, ‘ಜ್ವರ’ದಿಂದ ಮತ್ತೆ 15 ಮಂದಿ ಸತ್ತಿದ್ದಾರೆ ಎಂದು ತಿಳಿಸಿದೆ. ಸೋಂಕು ನಿಯಂತ್ರಣಕ್ಕೆ ಅದು ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಣೆ ಮಾಡಿದೆ.

ಮೂರು ದಿನಗಳಲ್ಲಿಯೇ ಈವರೆಗೂ 8,20,620 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 42 ಮಂದಿ ಮೃತಪಟ್ಟಿದ್ದಾರೆ. 3,24,550 ಜನರು ವೈದ್ಯಕೀಯ ಚಿಕಿತ್ಸೆಗೆ ಒಳಪಟ್ಟಿದ್ದಾರೆ ಎಂದು ಸರ್ಕಾರಿ ಮಾಧ್ಯಮ ಕೆಸಿಎನ್‌ಎ ವರದಿ ಮಾಡಿದೆ.
ಡಬ್ಲ್ಯೂಎಚ್‌ಒದ ಕೋವಿಡ್ ಸಾವಿನ ವರದಿಗೆ ವಿರೋಧ: ಭಾರತದ ಜತೆಗೂಡಿದ ಪಾಕಿಸ್ತಾನ!

ಸಾಂಕ್ರಾಮಿಕವು ಉತ್ತರ ಕೊರಿಯಾದಲ್ಲಿ ‘ಮಹಾ ವಿಪ್ಲವ’ ಉಂಟುಮಾಡಿದೆ ಎಂದು ಸರ್ವೋಚ್ಛ ನಾಯಕ ಕಿಮ್ ಜಾಂಗ್ ಉನ್ ಹೇಳಿದ್ದಾರೆ.

“ದೇಶದ ಎಲ್ಲ ಪ್ರಾಂತ್ಯಗಳು, ನಗರಗಳು ಮತ್ತು ಹಳ್ಳಿಗಳಲ್ಲಿ ಸಂಪೂರ್ಣ ಲಾಕ್‌ಡೌನ್ ವಿಧಿಸಲಾಗಿದೆ. ಉದ್ಯೋಗ ಘಟಕಗಳು, ಉತ್ಪಾದನಾ ಘಟಕಗಳು ಮತ್ತು ನಿವಾಸಿ ಘಟಕಗಳನ್ನು ಕೂಡ ಮುಚ್ಚಲಾಗಿದೆ” ಎಂದು ಕೆಸಿಎನ್‌ಎ ವರದಿ ತಿಳಿಸಿದೆ.

ಲಸಿಕೆ ಪಡೆಯದ ಜನರ ಮಧ್ಯೆ ಸೋಂಕು ಹರಡುವ ವೇಗವನ್ನು ನಿಯಂತ್ರಣ ಮಾಡಲು ಗರಿಷ್ಠ ತುರ್ತು ಕ್ವಾರೆಂಟೈನ್ ವ್ಯವಸ್ಥೆ ಜಾರಿ ಮಾಡಿದ್ದರೂ, ಉತ್ತರ ಕೊರಿಯಾದಲ್ಲಿ ಪ್ರತಿದಿನವೂ ಅತ್ಯಧಿಕ ಕೋವಿಡ್ ಸೋಂಕಿನ ಪ್ರಕರಣಗಖು ವರದಿಯಾಗುತ್ತಿವೆ.
ಲಸಿಕೆ ಪಡೆಯದವರಿಂದ ಪಡೆದವರಿಗೂ ಅಪಾಯ : ಟೊರೊಂಟೊದ ಅಧ್ಯಯನ

ರಾಜಧಾನಿ ಪ್ಯಾಂಗ್ಯಾಂಗ್‌ನಲ್ಲಿ ಗುರುವಾರ ಅಧಿಕ ಸಾಂಕ್ರಾಮಿಕ ಓಮಿಕ್ರಾನ್ ವೈರಸ್ ಖಚಿತವಾಗಿತ್ತು. ಇದರ ಬೆನ್ನಲ್ಲೇ ಕಿಮ್ ಅವರು ರಾಷ್ಟ್ರವ್ಯಾಪಿ ಲಾಕ್‌ಡೌನ್‌ಗೆ ಆದೇಶ ನೀಡಿದ್ದರು. ತನ್ನಲ್ಲಿ ಕೋವಿಡ್ ಪ್ರಕರಣ ಪತ್ತೆಯಾಗಿರುವುದಾಗಿ ಇದೇ ಮೊದಲ ಬಾರಿಗೆ ಸರ್ಕಾರ ಅಧಿಕೃತವಾಗಿ ಒಪ್ಪಿಕೊಂಡಿದೆ. ಎರಡು ವರ್ಷಗಳ ಹಿಂದೆ ಕೋವಿಡ್ ಸಾಂಕ್ರಾಮಿಕ ಆರಂಭವಾದಾಗಿನಿಂದ ಈವರೆಗೂ ಅದನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದ ಸರ್ಕಾರ, ಕೊನೆಗೂ ಸೋತಿದೆ ಎಂದು ವರದಿಯಾಗಿದೆ.

ಡಿಪಿಆರ್‌ಕೆ (ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಕೊರಿಯಾ) ಸ್ಥಾಪನೆಯ ಬಳಿಕ ನಮ್ಮ ದೇಶದಲ್ಲಿ ಮಾರಕ ಕಾಯಿಲೆಯ ಹರಡುವಿಕೆಯು ಮಹಾ ವಿಪತ್ತಾಗಿ ಪರಿಣಮಿಸಿದೆ ಎಂದು ಕಿಮ್ ಹೇಳಿದ್ದಾರೆ.

ಜಗತ್ತಿನಲ್ಲಿಯೇ ಅತ್ಯಂತ ಕಳಪೆ ಆರೋಗ್ಯ ವ್ಯವಸ್ಥೆ ಹೊಂದಿರುವ ದೇಶಗಳಲ್ಲಿ ಒಂದಾಗಿರುವ ಉತ್ತರ ಕೊರಿಯಾದಲ್ಲಿ ಯಾವುದೇ ಕೋವಿಡ್ ಲಸಿಕೆ ಲಭ್ಯವಿಲ್ಲ. ಜತೆಗೆ ಆಂಟಿವೈರಲ್ ಚಿಕಿತ್ಸೆ ಔಷಧಗಳು ಅಥವಾ ಸಾಮೂಹಿಕ ಚಿಕಿತ್ಸೆಯ ಸಾಮರ್ಥ್ಯ ಕೂಡ ಇಲ್ಲ.
ಚೀನಾದಲ್ಲಿ ಪ್ರಾಣಿಗಳ ರೀತಿ ಜನರನ್ನು ಕೂಡಿ ಹಾಕಿದ್ರೂ ಕೊರೊನಾ ಸ್ಫೋಟ..!

ಕೋವಿಡ್ ಲಸಿಕೆಗಳನ್ನು ನೀಡುವ ಚೀನಾದ ಆಫರ್ ಅನ್ನು ಉತ್ತರ ಕೊರಿಯಾ ಈ ಹಿಂದೆ ನಿರಾಕರಿಸಿತ್ತು. ವಿಶ್ವ ಆರೋಗ್ಯ ಸಂಸ್ಥೆಯ ಕೋವ್ಯಾಕ್ಸ್ ಯೋಜನೆಯಲ್ಲಿನ ಲಸಿಕೆ ಪೂರೈಕೆಯೂ ಬೇಡ ಎಂದಿತ್ತು. ಆದರೆ ಈಗ ಚೀನಾ ಹೊಸದಾಗಿ ವೈದ್ಯಕೀಯ ನೆರವು ಮತ್ತು ಲಸಿಕೆಗಳ ಆಫರ್ ನೀಡಿದೆ. ಹೊಸ ಪ್ರಕರಣಗಳು ಮತ್ತು ಮರಣಗಳಲ್ಲಿ ಕೋವಿಡ್ 19 ಪಾಸಿಟಿವ್ ಕಂಡುಬಂದಿದೆಯೇ ಎಂದು ಕೆಸಿಎನ್‌ಎ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಿಲ್ಲ. ಆದರೆ ದೇಶದಲ್ಲಿ ಕೋವಿಡ್ ಪರೀಕ್ಷೆಯ ವ್ಯವಸ್ಥೆ ಸಮರ್ಪಕವಾಗಿಲ್ಲ ಮತ್ತು ಅದರ ಮಟ್ಟವನ್ನು ನಿರ್ಣಯಿಸುವುದಕ್ಕೆ ಹೆಣಗಾಡುತ್ತಿದೆ ಎಂದು ಪರಿಣತರು ಹೇಳಿದ್ದಾರೆ.Source link

Leave a Reply

Your email address will not be published.