ಅಲ್ಪಸಂಖ್ಯಾತರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ: ಕೇಂದ್ರದ ವಿರುದ್ಧ ಸೋನಿಯಾ ವಾಗ್ದಾಳಿ

Cryptocurrencies melt down in a ‘perfect storm’ of fear and panic
May 13, 2022
The latest SEA Games 2022 medal tally for Malaysia
The latest SEA Games 2022 medal tally for Malaysia
May 13, 2022


ಉದಯಪುರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಕಾಂಗ್ರೆಸ್‌ನ ಮೂರು ದಿನಗಳ ಚಿಂತನ ಶಿಬಿರಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಚಾಲನೆ ನೀಡಿದ್ದಾರೆ. ಕೇಂದ್ರ ಸರ್ಕಾರವು ಅಲ್ಪಸಂಖ್ಯಾತರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ ಮತ್ತು ಮಹಾತ್ಮ ಗಾಂಧಿ ಕೊಲೆಗಡುಕರನ್ನು ವೈಭವೀಕರಿಸುತ್ತಿದೆ ಎಂದು ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸಾಂತ್ವನದ ಸ್ಪರ್ಶ ಅಗತ್ಯ ಇರುವ ಸಂದರ್ಭದಲ್ಲಿ ‘ನಮ್ಮ ನಿರರ್ಗಳ ಪ್ರಧಾನಿ’ ಮೌನವಾಗಿ ಇರುತ್ತಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

“ಚಿಂತನಾ ಶಿಬಿರವು ಅರ್ಥಪೂರ್ಣ ಆತ್ಮಾವಲೋಕನದ ಜತೆಗೆ ಬಿಜೆಪಿ, ಆರ್‌ಎಸ್ಎಸ್ ಮತ್ತು ಅವುಗಳ ಜತೆಗಾರ ಸಂಘಟನೆಗಳ ನೀತಿಗಳ ಪರಿಣಾಮವಾಗಿ ದೇಶ ಎದುರಿಸುತ್ತಿರುವ ಅನೇಕ ಸವಾಲುಗಳ ಕುರಿತು ನಮ್ಮ ನಡುವೆ ಚರ್ಚಿಸಲು ಅವಕಾಶ ನೀಡಿದೆ” ಎಂದು ಹೇಳಿದ್ದಾರೆ.
ಕಾಂಗ್ರೆಸ್‌ಗೆ ಇರುವ ಐದು ರಾಜಕೀಯ ಸವಾಲುಗಳನ್ನು ತೆರೆದಿಟ್ಟ ಮಲ್ಲಿಕಾರ್ಜುನ ಖರ್ಗೆ

ರಾಜಸ್ಥಾನದ ಉದಯಪುರದಲ್ಲಿ ಮೂರು ದಿನಗಳ ‘ನವ ಸಂಕಲ್ಪ ಚಿಂತನ ಶಿಬಿರ’ಕ್ಕೆ ಚಾಲನೆ ನೀಡಿ ಮಾತನಾಡಿದ ಸೋನಿಯಾ ಗಾಂಧಿ, “ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಹೋದ್ಯೋಗಿಗಳ ‘ಗರಿಷ್ಠ ಆಡಳಿತ, ಕನಿಷ್ಠ ಸರ್ಕಾರ’ ಘೋಷಣೆಯ ನಿಜವಾದ ಅರ್ಥ ಏನು ಎಂಬುದು ಸ್ಪಷ್ಟವಾದ ಬಳಿ ಬಹಳ ನೋವು ಉಂಟಾಗುತ್ತಿದೆ” ಎಂದು ತಿಳಿಸಿದ್ದಾರೆ.

“ಇದರ ಅರ್ಥ ದೇಶವನ್ನು ಧ್ರುವೀಕರಣದ ಸ್ಥಿತಿ, ಜನರು ಜೀವನವನ್ನು ನಿರಂತರ ಭಯ ಮತ್ತು ಅಭದ್ರತೆಯ ಭಾವದೊಂದಿಗೆ ಬದುಕುವಂತೆ ಮಾಡುವ ಸ್ಥಿತಿ, ಬಲಿಪಶುಗಳನ್ನು ಅಮಾನುಷವಾಗಿ ಗುರಿ ಮಾಡುವುದು ಮತ್ತು ನಮ್ಮ ಸಮಾಜದ ಅವಿಭಾಜ್ಯ ಅಂಗ ಹಾಗೂ ನಮ್ಮ ಗಣರಾಜ್ಯದ ಸಮಾನ ನಾಗರಿಕರಾಗಿರುವ ಅಲ್ಪಸಂಖ್ಯಾತರನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದಾಗಿದೆ” ಎಂದು ಕಿಡಿಕಾರಿದ್ದಾರೆ.
ಗಾಂಧಿ ಕುಟುಂಬಕ್ಕೆ ವಿನಾಯಿತಿ, ಸಮಗ್ರ ಸುಧಾರಣೆ: ಕಾಂಗ್ರೆಸ್ ‘ಚಿಂತನ ಶಿಬಿರ’ ಹೇಗಿರಲಿದೆ?

“ನಮ್ಮ ಸಮಾಜದ ಗತಕಾಲದ ಬಹುತ್ವವನ್ನು ನಮ್ಮನ್ನು ಒಡೆಯಲು ಬಳಸಿಕೊಳ್ಳುವುದು ಮತ್ತು ಬಹಳ ಜಾಗರಕತೆಯಿಂದ ಪೋಷಿಸಿದ ಏಕತೆ ಹಾಗೂ ವಿವಿಧತೆಯ ಪರಿಕಲ್ಪನೆಗಳ ದಿಕ್ಕುತಪ್ಪಿಸುವುದು ಇದರ ಅರ್ಥವಾಗಿದೆ. ರಾಜಕೀಯ ಎದುರಾಳಿಗಳನ್ನು ಬೆದರಿಸುವುದು ಮತ್ತು ಹೆದರಿಸುವುದು, ಅವರ ಪ್ರತಿಷ್ಠೆಗೆ ಕಳಂಕ ತರುವುದು, ತನಿಖಾ ಸಂಸ್ಥೆಗಳನ್ನು ಬಳಸಿ ಸಿನಿಮೀಯ ನೆಪಗಳನ್ನು ಒಡ್ಡಿ ಅವರನ್ನು ಜೈಲಿಗೆ ಕಳುಹಿಸುವುದಾಗಿದೆ” ಎಂದು ಸೋನಿಯಾ ಆರೋಪಿಸಿದ್ದಾರೆ.

“ಮಹಾತ್ಮ ಗಾಂಧಿ ಅವರ ಕೊಲೆಗಾರರನ್ನು ವೈಭವೀಕರಿಸುತ್ತಿದೆ ಮತ್ತು ಜವಾಹರಲಾಲ್ ನೆಹರೂ ಅವರಂತಹ ನಾಯಕರು ಮಾಡಿದ ಕೆಲಸಗಳನ್ನು ಇತಿಹಾಸದಿಂದ ಅಳಿಸಲಾಗುತ್ತಿದೆ. ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದು, ದಕ್ಕು ತಪ್ಪಿಸುವ ತಂತ್ರಗಳನ್ನು ಅನುಸರಿಸುವುದು ಮತ್ತು ಪ್ರಧಾನಿ ಅವರ ಸಾಂತ್ವನ ಬಹಳ ಅಗತ್ಯ ಇರುವಲ್ಲಿ ಅವರು ಮೌನವಾಗಿರುವುದು ಅವರ ಘೋಷಣೆಯ ಅರ್ಥ” ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್‌ನಲ್ಲಿ ‘ಒಂದು ಕುಟುಂಬ ಒಂದು ಟಿಕೆಟ್’ ನಿಯಮ: ಗಾಂಧಿ ಕುಟುಂಬಕ್ಕೆ ಮಾತ್ರ ವಿನಾಯಿತಿ?

“ಸಂಘಟನೆಯಲ್ಲಿನ ಬದಲಾವಣೆ ಈ ಕಾಲದ ಅಗತ್ಯವಾಗಿದೆ. ನಾವು ಕೆಲಸ ಮಾಡುವ ರೀತಿಯನ್ನು ನಾವು ಬದಲಿಸಿಕೊಳ್ಳಬೇಕಿದೆ. ಶಿಬಿರದಲ್ಲಿ ತಮ್ಮ ಅಭಿಪ್ರಾಯಗಳನ್ನು ಪಕ್ಷದ ಸದಸ್ಯರು ಮುಕ್ತವಾಗಿ ಹಂಚಿಕೊಳ್ಳಬೇಕು. ಆದರೆ ಪ್ರಬಲ ಪಕ್ಷ ಮತ್ತು ಏಕತೆಯ ಸಂದೇಶ ದೇಶಕ್ಕೆ ರವಾನೆಯಾಗಬೇಕು” ಎಂದು ಸೋನಿಯಾ ಗಾಂಧಿ ಪಕ್ಷದ ಸದಸ್ಯರಿಗೆ ಸಲಹೆ ನೀಡಿದ್ದಾರೆ.Source link

Leave a Reply

Your email address will not be published.