ಅಮೆರಿಕದ ದಿನಸಿ ಅಂಗಡಿಯಲ್ಲಿ ಕಪ್ಪುವರ್ಣೀಯರನ್ನು ಗುರಿಯಾಗಿಸಿ ಗುಂಡಿನ ದಾಳಿ: 10 ಮಂದಿ ಹತ್ಯೆ

Mumbai local train services to be disrupted on Sunday due to maintenance work
Mumbai local train services to be disrupted on Sunday due to maintenance work
May 15, 2022
EarthSky | Mars and Jupiter conjunction, May 29
EarthSky | Mars and Jupiter conjunction, May 29
May 15, 2022


ನ್ಯೂಯಾರ್ಕ್: ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ 18 ವರ್ಷದ ಯುವಕನೊಬ್ಬ ಅಮೆರಿಕದ ನ್ಯೂಯಾರ್ಕ್‌ನ ಬಫಲೋದಲ್ಲಿನ ದಿನಸಿ ಅಂಗಡಿ ಒಂದರಲ್ಲಿ ಭೀಕರ ಗುಂಡಿನ ದಾಳಿ ನಡೆಸಿ 10 ಮಂದಿಯನ್ನು ಕೊಂದು ಹಾಕಿದ್ದಾನೆ. ಇದು ‘ಜನಾಂಗೀಯ ಪ್ರೇರಿತ’ ದಾಳಿ ಎಂದು ಸ್ಪಷ್ಟವಾಗಿದ್ದು, ಆತ ತನ್ನ ಕೃತ್ಯವನ್ನು ಕ್ಯಾಮೆರಾ ಮೂಲಕ ನೇರ ಪ್ರಸಾರ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಲ್ಮೆಟ್ ಮತ್ತು ಸೇನಾ ಸಾಧನಗಳನ್ನು ಧರಿಸಿದ್ದ ಬಿಳಿ ವರ್ಣೀಯ ಬಂದೂಕುಧಾರಿಯನ್ನು ಹತ್ಯಾಕಾಂಡದ ಬಳಿಕ ಬಂಧಿಸಲಾಗಿದೆ ಎಂದು ಬಫಲೋ ಪೊಲೀಸ್ ಆಯುಕ್ತ ಜೋಸೆಫ್ ಗ್ರಾಮಾಗ್ಲಿಯಾ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಕ್ಯಾಲಿಫೋರ್ನಿಯಾದಲ್ಲಿ ಗುಂಡಿನ ದಾಳಿ; ಆರು ಸಾವು, 12 ಮಂದಿಗೆ ಗಾಯ

ಗುಂಡಿನ ದಾಳಿಯಲ್ಲಿ ಹತ್ತು ಮಂದಿ ಬಲಿಯಾಗಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ. ಬಲಿಯಾದ ಹೆಚ್ಚಿನವರು ಕಪ್ಪು ವರ್ಣೀಯರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಟಾಪ್ಸ್ ಸೂಪರ್‌ ಮಾರ್ಕೆಟ್‌ಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹೊತ್ತು ಬಂದ ಬಂದೂಕುಧಾರಿ, ಮೊದಲು ಪಾರ್ಕಿಂಗ್ ಲಾಟ್‌ನಲ್ಲಿದ್ದ ನಾಲ್ವರು ವ್ಯಕ್ತಿಗಳ ಮೇಲೆ ಗುಂಡು ಹಾರಿಸಿದ್ದಾನೆ. ಅವರಲ್ಲಿ ಮೂವರು ಮಾರಣಾಂತಿಕವಾಗಿ ಗಾಯಗೊಂಡಿದ್ದರು. ಬಳಿಕ ಸೂಪರ್ ಮಾರ್ಕೆಟ್ ಒಳಗೆ ನುಗ್ಗಿದ ಆತ, ಗುಂಡಿನ ದಾಳಿ ಮುಂದುವರಿಸಿದ್ದಾನೆ ಎಂದು ಗ್ರಾಮಗ್ಲಿಯಾ ತಿಳಿಸಿದ್ದಾರೆ. ಅಂಗಡಿ ಒಳಗೆ ಹತ್ಯೆಯಾದವರಲ್ಲಿ ಸಶಸ್ತ್ರ ಭದ್ರತಾ ಕಾವಲು ವಿಭಾಗದಲ್ಲಿ ಕೆಲಸ ಮಾಡಿದ್ದ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಕೂಡ ಸೇರಿದ್ದಾರೆ.
ಇಸ್ರೇಲ್‌: ಟೆಲ್‌ ಅವೀವ್‌ನಲ್ಲಿ ಗುಂಡಿನ ಸುರಿಮಳೆಗರೆದ ಬಂದೂಕುಧಾರಿ, ಇಬ್ಬರ ಸಾವು, ಹಲವರಿಗೆ ಗಾಯ

ನಿವೃತ್ತ ಅಧಿಕಾರಿ ಶಂಕಿತನ ಜತೆ ಗುಂಡಿನ ಚಕಮಕಿ ನಡೆಸಿದರು. ಹಲವು ಗುಂಡುಗಳನ್ನು ಹಾರಿಸಿದರು. ಆದರೆ ಗುಂಡು ನಿರೋಧಕ ಧರಿಸಿದ್ದ ಬಂದೂಕುಧಾರಿ, ಅಧಿಕಾರಿಯನ್ನು ಗುಂಡಿಕ್ಕಿ ಕೊಂದಿದ್ದಾನೆ. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಬಂದೂಕುಧಾರಿ ತನ್ನ ಕುತ್ತಿಗೆಗೆ ಬಂದೂಕು ಹಿಡಿದುಕೊಂಡಿದ್ದಾನೆ. ಆದರೆ, ಅಂತಿಮವಾಗಿ ಶರಣಾದ ಎಂದು ತಿಳಿಸಿದ್ದಾರೆ.

ಈ ಗುಂಡಿನ ದಾಳಿ ದ್ವೇಷ ಅಪರಾಧವಾಗಿರಬಹುದು ಎಂಬ ಆಯಾಮದಲ್ಲಿ ತನಿಖೆ ನಡೆಸಲಾಗುವುದು ಎಂದು ಎಫ್‌ಬಿಐನ ಬಫಲೋ ಕ್ಷೇತ್ರ ಕಚೇರಿ ಉಸ್ತುವಾರಿ ಸ್ಟೀಫನ್ ಬೆಲೊಂಗಿಯಾ ತಿಳಿಸಿದ್ದಾರೆ. “ದ್ವೇಷ ಅಪರಾಧ ಮತ್ತು ಜನಾಂಗೀಯ ಪ್ರೇರಿತ ಹಿಂಸಾ ಉಗ್ರವಾದದ ಕೃತ್ಯವೇ ಎಂಬ ಎರಡೂ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ” ಎಂದು ಹೇಳಿದ್ದಾರೆ.Source link

Leave a Reply

Your email address will not be published.