ಅಗ್ನಿ ಅನಾಹುತದಲ್ಲಿ 27 ಮಂದಿ ಸಜೀವ ದಹನದ ದುರಂತ: ದಿಲ್ಲಿ ಕಟ್ಟಡದ ಮಾಲೀಕನ ಬಂಧನ

પુત્રને પિતાની વાત માઠી લાગી: માણસામાં પિતાએ ટ્યુશન જવા બાબતે ઠપકો આપતા ધોરણ-11 માં ભણતા પુત્રએ ગૃહ ત્યાગ કર્યો
પુત્રને પિતાની વાત માઠી લાગી: માણસામાં પિતાએ ટ્યુશન જવા બાબતે ઠપકો આપતા ધોરણ-11 માં ભણતા પુત્રએ ગૃહ ત્યાગ કર્યો
May 15, 2022
Why auto stocks may be the best bet for next 2-3 years
Why auto stocks may be the best bet for next 2-3 years
May 15, 2022


ಹೊಸದಿಲ್ಲಿ: ದಿಲ್ಲಿಯ ಮುಂಡ್ಕಾದಲ್ಲಿ 27 ಜನರ ದುರ್ಮರಣಕ್ಕೆ ಕಾರಣವಾದ ಬೆಂಕಿ ಅನಾಹುತ ಸಂಭವಿಸಿದ ಕಟ್ಟಡದ ಮಾಲೀಕನನ್ನು, ಘಟನೆ ನಡೆದು ಎರಡು ದಿನಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ ಸಂದರ್ಭದಿಂದ ಈತ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಮುಂಡ್ಕಾ (Mundka) ಪ್ರದೇಶದಲ್ಲಿನ ನಾಲ್ಕು ಅಂತಸ್ತಿನ ಕಟ್ಟಡದ ಮೊದಲನೇ ಅಂತಸ್ತಿನಲ್ಲಿ ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 21 ಮಹಿಳೆಯರು ಸೇರಿದಂತೆ 27 ಮಂದಿ ಜೀವ ಕಳೆದುಕೊಂಡಿದ್ದರು. “ತಲೆಮರೆಸಿಕೊಂಡಿದ್ದ ಕಟ್ಟಡ ಮಾಲೀಕ ಮನೀಶ್ ಲಾಖ್ರಾ ಎಂಬಾತನನ್ನು ದಿಲ್ಲಿ ಮತ್ತು ಹರ್ಯಾಣದಲ್ಲಿ ದಾಳಿಗಳನ್ನು ನಡೆಸಿದ ಬಳಿಕ ಬಂಧಿಸಿದ್ದೇವೆ” ಎಂದು ಉಪ ಪೊಲೀಸ್ ಆಯುಕ್ತ ಸಮೀರ್ ಶರ್ಮಾ ತಿಳಿಸಿದ್ದಾರೆ.
Delhi Fire: ದಿಲ್ಲಿಯಲ್ಲಿ ಭೀಕರ ಅಗ್ನಿ ದುರಂತ; 27 ಮಂದಿ ಸಾವು, 30 ಜನರಿಗೆ ಗಾಯ

ಮನೀಶ್ ಲಾಖ್ರಾ ಮುಂಡ್ಕಾ ನಿವಾಸಿಯಾಗಿದ್ದಾನೆ. ಮನೀಶ್ ಲಾಖ್ರಾ ಮತ್ತು ಆತನ ಕುಟುಂಬದವರು ಬೆಂಕಿ ಹೊತ್ತಿಕೊಂಡ ಕಟ್ಟಡದ ಅದೇ ನಾಲ್ಕನೇ ಮಹಡಿಯಲ್ಲಿ ಇದ್ದರು. ಅಗ್ನಿ ಅನಾಹುತ ಸಂಭವಿಸಿದಾಗ ಕ್ರೇನ್ ಸಹಾಯದಿಂದ ಅವರು ಸುರಕ್ಷಿತವಾಗಿ ಕೆಳಕ್ಕೆ ಇಳದಿದ್ದರು. ಬಳಿಕ ಅಲ್ಲಿಂದ ಪರಾರಿಯಾಗಿದ್ದರು.

ಇನ್ನೂ 19 ಮಂದಿ ಕಣ್ಮರೆಯಾಗಿದ್ದಾರೆ. ಅವರನ್ನು ಜೀವಂತವಾಗಿ ಪತ್ತೆ ಮಾಡುವ ಸಣ್ಣ ಭರವಸೆಯೊಂದಿಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆ ಹೊರಭಾಗದಲ್ಲಿ ಕುಟುಂಬಗಳ ಸದಸ್ಯರು ಆತಂಕದಿಂದ ಕಾದು ನಿಲ್ಲುವುದು ಮುಂದುವರಿದಿದೆ. ಇನ್ನೂ 19 ದೇಹಗಳ ಗುರುತು ಪತ್ತೆಯಾಗಿಲ್ಲ.
ದಿಲ್ಲಿಯಲ್ಲಿ ಅಗ್ನಿ ದುರಂತ : ಮುಗಿಲುಮುಟ್ಟಿದ ಕುಟುಂಬದ ಆಕ್ರಂದನ, ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
ಬೆಂಕಿಗೆ ಸಜೀವ ದಹನಗೊಂಡವರಲ್ಲಿ ಸ್ಫೂರ್ತಿದಾಯಕ ಮಾತುಗಾರ ಕೈಲಾಶ್ ಜ್ಯಾನಿ ಮತ್ತು ಅವರ ಮಗ ಅಮನ್ ಜ್ಯಾನಿ ಕೂಡ ಸೇರಿದ್ದಾರೆ. ಗುರುಗ್ರಾಮ ನಿವಾಸಿಯಾಗಿರುವ ಕೈಲಾಶ್ ಜ್ಯಾನಿ ಅವರು ಕಟ್ಟಡದ ಎರಡನೇ ಮಹಡಿಯಲ್ಲಿ ಭಾಷಣ ಮಾಡುತ್ತಿದ್ದರು. ಅದರಲ್ಲಿ ಅನೇಕರು ಭಾಗವಹಿಸಿದ್ದು, ಹೆಚ್ಚಿನ ಸಾವುಗಳು ಅಲ್ಲಿಯೇ ಸಂಭವಿಸಿವೆ.

“ನನಗೆ ಮೂವರು ಸಹೋದರಿಯರು. ಅವರೆಲ್ಲರೂ ಕಣ್ಮರೆಯಾಗಿದ್ದಾರೆ. ಡಿಎನ್‌ಎ ಪರೀಕ್ಷೆ ನಡೆಸುವಂತೆ ಆಸ್ಪತ್ರೆಗೆ ನಾವು ಮನವಿ ಮಾಡಿದ್ದೇವೆ. ಅವರಿಂದ ಇನ್ನೂ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ. ನನ್ನ ಸಹೋದರಿಯರು ಕ್ಯಾಮೆರಾ ಪ್ಯಾಕೇಜಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು” ಎಂದು ತನ್ನ ಸಹೋದರಿಯರು ಬದುಕಿದ್ದಾರೆಯೇ ಅಥವಾ ಸತ್ತಿದ್ದಾರೆಯೇ ಎನ್ನುವುದು ಖಚಿತವಾಗದೆ ಆಘಾತಕ್ಕೆ ಒಳಗಾಗಿರುವ ರಾಜೇಶ್ ಕುಮಾರ್ ತಿಳಿಸಿದ್ದಾರೆ.
ಪಂಜಾಬ್ ಆಸ್ಪತ್ರೆಯಲ್ಲಿ ಭಾರಿ ಬೆಂಕಿ ಅನಾಹುತ: ಅದೃಷ್ಟವಶಾತ್ ರೋಗಿಗಳು ಬಚಾವ್

ಹವಾ ನಿಯಂತ್ರಣದಲ್ಲಿ ಉಂಟಾದ ಸ್ಫೋಟವು ಬೆಂಕಿ ಅವಘಡಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಸಿಸಿಟಿವಿ ಕ್ಯಾಮೆರಾ ಮತ್ತು ರೂಟರ್ ಉತ್ಪಾದನೆ ಹಾಗೂ ಜೋಡಣಾ ಕಂಪೆನಿಯ ಕಚೇರಿ ಇರುವ ವಾಣಿಜ್ಯ ಕಟ್ಟಡದ ಮೊದಲ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಕಟ್ಟಡದ ಎಲ್ಲ ಮಹಡಿಗಳನ್ನೂ ಅದೇ ಕಂಪೆನಿ ಬಳಸುತ್ತಿತ್ತು. ಕಂಪೆನಿ ಮಾಲೀಕರಾದ ಹರೀಶ್ ಗೋಯಲ್ ಮತ್ತು ವಿಜಯ್ ಗೋಯಲ್ ಅವರನ್ನು ಬಂಧಿಸಲಾಗಿದೆ. ಕನಿಷ್ಠ 50 ಮಂದಿಯನ್ನು ಕಟ್ಟಡದಿಂದ ರಕ್ಷಿಸಲಾಗಿದ್ದು, ಸುಮಾರು 29 ಮಂದಿ ಕಣ್ಮರೆಯಾಗಿದ್ದಾರೆ. ಅವರಲ್ಲಿ 24 ಮಂದಿ ಮಹಿಳೆಯರಾಗಿದ್ದಾರೆ. ಹೆಚ್ಚಿನ ಮೃತದೇಹಗಳ ಡಿಎನ್‌ಎ ಪರೀಕ್ಷೆಗೆ ಕಾಯಲಾಗುತ್ತಿದೆ.Source link

Leave a Reply

Your email address will not be published.